ಮೈಕೇಲಿಯ ಚಂಪಕ L. - ಮ್ಯಾಗ್ನೋಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಆನಿಕೆಗಳನ್ನೊಳಗೊಂಡ 30 ಮೀ. ವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿ -ರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿದ್ದು ಕಿತ್ತಳೆ ಬಣ್ಣದ ಮಚ್ಚೆಗಳನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ಉದುರಿದ ಕಾವಿನೆಲೆಗಳ ವಲಯಾಕಾರದ ಗುರುತುಗಳ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಅಗ್ರದಲ್ಲಿನ ಅಂಕುರ ರೇಷ್ಮೆಯಂತಹ ಭರ್ಜಿಯಾಕಾರದ ಕಾವಿನೆಲೆಗಳಿಂದ ಸೂಕ್ಷ್ಮವಾದ ಮೃದು ತುಪ್ಪಳದಿಂದ ಮುಚ್ಚಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ;ತೊಟ್ಟುಗಳು 1 ರಿಂದ 3 ಸೆಂಮೀ. ಉದ್ದವಿದ್ದು ದೃಢವಾಗಿರುತ್ತವೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ;ಪತ್ರಗಳು 9.5-25 x 3.5 – 9 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತ –ಭರ್ಜಿ ಆಕಾರದಲ್ಲಿರುತ್ತವೆ. ಪತ್ರಗಳು ತಿರುಚಿದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ ಮತ್ತು ಚೂಪಾದುದರಿಂದ ಒಳಬಾಗಿದ ಬುಡ ಹೊಂದಿದ್ದು ರೋಮರಹಿತವಾಗಿರುತ್ತವೆ; ಅಂಚು ಸ್ವಲ್ಪ ಮಟ್ಟಿಗೆ ತರಂಗಿತವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿ -ರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಹೆಚ್ಚೂ ಕಡಿಮೆ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 12 ರಿಂದ 16 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಸನಿಹವಾಗಿದ್ದು ದೃಢವಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ದೊಡ್ಡದಾಗಿದ್ದು,ಹಳದಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿ -ರುತ್ತವೆ ಮತ್ತು ಸುವಾಸನೆಯಿಂದ ಕೂಡಿರುತ್ತವೆ.
ಕಾಯಿ /ಬೀಜ : ಕಾಯಿಗಳು ಫಾಲಿಕಲ್ ಮಾದರಿಯಲ್ಲಿದ್ದು ಗಂತಿಗಳನ್ನು ಹೊಂದಿರುತ್ತವೆ ಮತ್ತು 2 ರಿಂದ 3 ಸೆಂ.ಮೀ ಉದ್ದವಿರುತ್ತವೆ ಮತ್ತು ಕದಿರುಮಂಜರಿಯ ಹಾಗೆ ಜೋಡಣೆಗೊಂಡಿರುತ್ತವೆ; ಫಾಲಿಕಲ್ಗಳು ಬೆನ್ನಿನ ಬಳಿ ಬಿರಿಯುತ್ತವೆ;ಬೀಜ 1 ದ್ದು ಕಡುಗೆಂಪು ಬಣ್ಣ ಹೊಂದಿರುತ್ತದೆ.

ಜೀವಪರಿಸ್ಥಿತಿ :

2400 ಮೀ. ಎತ್ತರದವರೆಗಿನ ಕಡಿಮೆ ಮತ್ತು ಮಧ್ಯಮ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಆಗಾಗ್ಗೆ ಈ ಪ್ರಭೇದ ಕಂಡು ಬರುತ್ತದೆ; ಈ ಸಸ್ಯವನ್ನು ಬೆಳೆಯುತ್ತಾರೆ.

ವ್ಯಾಪನೆ :

ಇಂಡೋಮಲೇಶಿಯ ಮತ್ತು ಚೈನ ;ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Linnaeus, Sp.Pl. 536.1753;Gamble,Fl.Madras 1:9. 1993(rep.ed.); Saldanha, Fl. Karnataka 1:37.1984; Sasidharan, Biodiversity documentation for Kerala Plants, part 6, 15.2004.

Top of the Page