ಮೆಮೆಸಿಲಾನ್ ಅಂಬೆಲ್ಲೇಟಂ Burm.f. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ಸೀಳಿಕೆಗಳನ್ನು ಹೊಂದಿರುತ್ತದೆ ಹಳೆಯದಾದ ಮೇಲೆ ತೆಳುವಾದ ಚಕ್ಕೆ ರೂದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ –ಲ್ಲಿರುತ್ತವೆ ತೊಟ್ಟುಗಳು ಅಂದಾಜು 1 ಸೆಂ.ಮೀ.ಉದ್ದವಿದ್ದು ಕಾಲುವೆ ಗೆರೆಗಳ ಸಮೇತ -ವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 1.8-8.5 X 0.8 -3.8 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡವೃತ್ತ-ಅಂಡದವರೆಗಿನ ಆಕಾರದಲ್ಲಿದ್ದು ಕ್ರಮೇಣ ಚೂಪಾಗುವ ಮಾದರಿಯಲ್ಲಿರುವ ಅಥವಾ ಕೆಲವು ವೇಳೆ ಚೂಪಾಗಿರುವ ತುದಿ ಹೊಂದಿರುತ್ತವೆ;ಪತ್ರಗಳ ಬುಡ ಚೂಪಾದುದರಿಂದ ಒಳಬಾಗಿದ ಬುಡ ಹೊಂದಿರುತ್ತವೆ; ಅಂಚು ನಯವಾಗಿರುತ್ತದೆ; ಪತ್ರಗಳು ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ ಮತ್ತು ಒಣಗಿದಾಗ ಕಂದು ಬಣ್ಣ ಹೊದಿರುತ್ತವೆ; ಮಧ್ಯನಾಳ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಸ್ಪಷ್ಟವಾದ ವೃಂತಗಳನ್ನುಳ್ಳ ದಟ್ಟವಾದ, ಮಧ್ಯಾರಂಭಿ ಪೀಠಛತ್ರ ಮಾದರಿಯದಾಗಿದ್ದು ಅಕ್ಷಾಕಂಕುಳಿನಲ್ಲಿರುವ ಅಥವಾ ಪಾರ್ಶ್ವದ ಮೇಲಿನ ಗುಬುಟುಗಳ ಮೇಲಿರುತ್ತವೆ;ಹೂಗಳು ಕಡು ನೀಲಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳುಗೋಳಾಕಾರದಲ್ಲಿದ್ದು, ಹಳದಿ ಬಣ್ಣ ಹೊಂದಿರುತ್ತವೆ ಹಾಗೂ 0.5 ಸೆಂ.ಮೀ. ವ್ಯಾಸ ಹೊಂದಿರುತ್ತವೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ತೆರೆದ ಅರೆನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಭಾರತದ ಪ್ರಯಾಯ ದ್ವೀಪ ಮತ್ತು ಶ್ರೀಲಂಕಾ:ಪಶ್ಚಿಮ ಘಟ್ಟದ ಎಲ್ಲಾ ಭಗಗಳಲ್ಲಿ ಈ ಸಸ್ಯ ಬೆಳೆಯುತ್ತದೆ.

ಗ್ರಂಥ ಸೂಚಿ :

Burm.f, Fl. Ind. 87:1768;Gamble, Fl. Madras 1:505.1997 (rep.ed.)Sasidharan, Biodiversity documentation for Kerala Plants, part 6, 183.2004; Saldanha, Fl. Karnataka 2:40.1996.

Top of the Page