ಮೆಮೆಸಿಲಾನ್ ರಂಡೀರಿಯಾನ SM & MR Almeida - ಮೆಲಾಸ್ಟೊಮಟೇಸಿ

Synonym : ಮೆಮೆಸಿಲಾನ್ ಮಲಬಾರಿಕಮ್ (Cl.)Cogn.; ಮೆಮೆಸಿಲಾನ್ ಆಮ್ಪ್ಲೆಕ್ಸಿಕಾಲ್ Roxb.var. ಮಲಬಾರಿಕ Cl.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ –ಲ್ಲಿರುತ್ತವೆ ಮತ್ತು ತೊಟ್ಟುರಹಿತ ಅಥವಾ ಉಪತೊಟ್ಟುರಹಿತವಾಗಿರುತ್ತವೆ;ಪತ್ರಗಳು 5 - 13 X2.5 - 5.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡಾಕಾರದಿಂದ ಅಂಡ- ಭರ್ಜಿ ಯವರೆಗಿನ ಆಕಾರದಲ್ಲಿರುತ್ತವೆ;ಪತ್ರಗಳು ಚೂಪಾದ ಅಥವಾ ಚೂಪಲ್ಲದ ತುದಿ, ದುಂಡಾದುದರಿಂದ ಉಪ-ಹೃದಯಾಕಾರದವರೆಗಿನ ರೀತಿಯ ಬುಡ ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಪತ್ರಗಳು ದಪ್ಪವಾದ ತೊಗಲನ್ನೋಲುವ ಮಾದರಿಯವುಗಳಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆಗಳ ಸಮೇತವಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಗೋಚರ ಅಥವಾ ಎಲೆಗಳು ಒಣಗಿದ ಸಂದರ್ಭ -ದಲ್ಲಾದರೂ ಸೂಕ್ಷ್ಮವಾಗಿ ಕಾಣುವಂತಿರುತ್ತವೆ ;ಮೂರನೇ ದರ್ಜೆಯ ನಾಳಗಳು ಅಗೋಚರ.
ಪುಷ್ಪಮಂಜರಿ/ಹೂಗಳು : ಹೂಗಳು ನೀಲಿಬಣ್ಣ ಹೊಂದಿದ್ದು ಗುಚ್ಛಗಳಲ್ಲಿರುತ್ತವೆ;ಗುಚ್ಛಗಳು ಒಂಟಿಯಾಗಿ ಅಥವಾ ತೀರಾ ಚಿಕ್ಕದಾದ ವೃಂತವುಳ್ಳ ಮಧ್ಯಾಭಿಸರ ಮಂಜರಿಯಲ್ಲಿರುತ್ತವೆ ಹಾಗೂ ಸಾಮಾನ್ಯವಾಗಿ ಪಾರ್ಶ್ವದಲ್ಲಿನ ಗುಬುಟುಗಳ ಮೇಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಒಳಛಾವಣಿಯ ಮರಗಳಾಗಿ ಕಂಡುಬರುವ ಈ ಪ್ರಭೇದ 2400 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ

ಗ್ರಂಥ ಸೂಚಿ :

JBNHS,85:521;DC., Manogr. Phan. 7:1148.1891;Gamble, Fl. Madras 1:505.1997 (rep.ed.)Sasidharan, Biodiversity documentation for Kerala Plants, part 6, 182.2004;Saldanha, Fl. Karnataka 2:39.1996.

Top of the Page