ಮೆಮೆಸಿಲಾನ್ ಲುಶಿಂಗ್ಟೋನಿಯೈ Gamble - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 7 ಮೀ. ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು ಉಪದುಂಡಾಕಾರದಲ್ಲಿರುತ್ತವೆ ಮತ್ತು ರೋಮರಹಿತ --ವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.3 ರಿಂದ 0.4 ಸೆಂ.ಮೀ. ಉದ್ದವಿರುತ್ತವೆ; ಪತ್ರಗಳು 3-8.7X0.8-4 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತದಿಂದ ಸಂಕುಚಿತ ಅಂಡವೃತ್ತ ಅಥವಾ ಬುಗುರಿಯಆಕಾರದಲ್ಲಿರುತ್ತವೆ;ಪತ್ರಗಳು ಚೂಪಲ್ಲದ ಅಥವಾ ದುಂಡಾದ ತುದಿಯಲ್ಲಿ ಕಚ್ಚನ್ನುಳ್ಳ ಮಾದರಿಯ ತುದಿ, ಚೂಪಾದುದರಿಂದ ಉಪ-ಒಳಬಾಗಿದ ಬುಡ ಹೊಂದಿರುತ್ತವೆ;ಅಂಚುನಯವಾಗಿರುತ್ತದೆ;ಪತ್ರಗಳು ಒಣಗಿದಾಗ ಹಸಿರಾಗಿರುತ್ತವೆ; ಮಧ್ಯನಾಳ ಕಾಲುವೆ ಗೆರೆಗಳ ಸಮೇತವಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಗೋಚರ.
ಪುಷ್ಪಮಂಜರಿ/ಹೂಗಳು : ಹೂಗಳು ತೆಳು ನೀಲಿಬಣ್ಣ ಹೊಂದಿದ್ದು, ಕಿರುತೊಟ್ಟುಗಳ ಸಹಿತವಿದ್ದು ಅಕ್ಷಾಕಂಕುಳಿ -ನಲ್ಲಿನ ಅಥವಾ ಪಾರ್ಶ್ವದಲ್ಲಿನ ಕಿರು ಗಾತ್ರದ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದ ಹೊಂದಿದ್ದು 0.2-0.3 ಸೆಂ.ಮೀ. ವ್ಯಾಸಹೊದಿರುತ್ತವೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಧಾರಣವಾಗಿ 300 ರಿಂದ 1400 ಮೀ.ನಡುವಿನ ಎತ್ತರದ ಪ್ರದೇಶಗಳ ಒಣ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಕಂಡುಬರುವ ಈ ಪ್ರಭೇದ ಕೆಲವು ವೇಳೆ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಒಣ ಪ್ರದೇಶಗಳ ಅಂಚಿನಲ್ಲಿ ಬೆಳೆಯುತ್ತವೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪಗಳು; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Bull. Misc.Inform. Kew 1919:227.1919;Gamble, Fl. Madras 1:503.1997 (rep.ed.)Sasidharan, Biodiversity documentation for Kerala Plants, part 6, 181.2004.

Top of the Page