ಮೆಮೆಸಿಲಾನ್ ಹೇನಿಯಾನಮ್ Benth. ex Wt. & Arn. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಸಣ್ಣಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.7 -1 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 13-16 X 4 –5 ಸೆಂ.ಮೀ ಗಾತ್ರ ಹೊಂದಿದ್ದು ಭರ್ಜಿ ಹಂತ ಹಂತವಾಗಿ ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿಯನ್ನು ಸೇರುವ ರೀತಿಯ ಆಕಾರದಲ್ಲಿರುತ್ತವೆ;ಪತ್ರದ ಬುಡ ಚೂಪಾಗಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳು ರೋಮರಹಿತವಾಗಿದ್ದು ತೊಗಲ್ಲನ್ನೋಲುವ ಮಾದರಿಯಲ್ಲಿರುತ್ತದೆ; ಮಧ್ಯ ನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 20 ಜೋಡಿಗಳಿರುತ್ತವೆ ಮತ್ತು ಅಂತರ ಹೊಂದಿದ್ದು ಸಮಾನಾಂತರದಲ್ಲಿರುತ್ತವೆ ಹಾಗೂ ಮತ್ತು ಅಂಚಿನ ನಾಳಗಳನ್ನು ಸೇರುತ್ತವೆ;ಮೂರನೇ ದರ್ಜೆಯ ನಾಳಗಳು ಅಗೋಚರ.
ಪುಷ್ಪಮಂಜರಿ/ಹೂಗಳು : ಹೂಗಳು ಹೆಚ್ಚೂ ಕಡಿಮೆ ತೊಟ್ಟುರಹಿತವಾಗಿದ್ದು,ಅಕ್ಷಾಕಂಕುಳಿನಲ್ಲಿನ ಮತ್ತು ಪಾರ್ಶ್ವದಲ್ಲಿನ ಗುಚ್ಛಗಳಲ್ಲಿದ್ದು ಕೆನ್ನೀಲಿ ಬಣ್ಣದವುಗಳಾಗಿರುತ್ತವೆ;ಬಿಂಬದ ರೇಖೆಗಳು ಪ್ರಮುಖವಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಬೆರ್ರಿ ಮಾದರಿಯಲ್ಲಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

900 ಮೀ.ವರೆಗಿನ ಮುಖ್ಯವಾಗಿ ಕೆಳ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಗೆ ಬೆಳೆಯುವ ಅಪರೂಪವಾದ ಸಸ್ಯವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಈ ಪ್ರಭೇದ ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ದಕ್ಷಿಣ(ಕೊಡಗು ಪ್ರದೇಶಗಳವರೆಗೆ) ಭಾಗದಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Wt. & Arn., Prodr. 319.1834; Gamble, Fl. Madras 1:503.1997 (rep.ed.)Sasidharan, Biodiversity documentation for Kerala Plants, part 6, 181.2004.

Top of the Page