ಮೆಮೆಸಿಲಾನ್ ಅಂಗುಸ್ಟಿಫೋಲಿಯಮ್ Wt. - ಮೆಲಾಸ್ಟೊಮಟೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಹರಡುವ ಪೊದೆಗಳು ಅಥವಾ ಅಂದಾಜು 4 ಮೀ.ಎತ್ತರವುಳ್ಳ ಕಿರುಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.3 ರಿಂದ 0.4 ಸೆಂ.ಮೀ. ಉದ್ದವಿರುತ್ತವೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 3-9.5 X 0.5 –1.9 ಸೆಂ.ಮೀ ಗಾತ್ರ ಹೊಂದಿದ್ದು ಸಂಕುಚಿತ ರೇಖಾತ್ಮಕ- ಅಂಡವೃತ್ತದಿಂದ ರೇಖಾತ್ಮಕ-ಭರ್ಜಿಯವರೆಗಿನ ಆಕಾರದಲ್ಲಿದ್ದು ಚೂಪಾದ ತುದಿ ಮತ್ತು ಒಳಬಾಗಿದ ಬುಡವನ್ನುಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಮೇಲ್ಮೈ ರೋಮರಹಿತವಾಗಿದ್ದು ತೊಗಲ್ಲನ್ನೋಲುವ ಮಾದರಿಯಲ್ಲಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಅಂತರ ಅಂಚಿನ ನಾಳವನ್ನೊಳಗೊಂಡು ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ನೀಲಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿರುವ ಪೀಠಛತ್ರದಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು,ಕೆನ್ನೀಲಿ ಬಣ್ಣ ಹೊಂದಿದ್ದು 0.7 ಸೆಂ.ಮೀ. ಅಡ್ಡಗಲದ ಗಾತ್ರದಲ್ಲಿರುತ್ತದೆ ಮತ್ತು ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

300 ಮೀ.ವರೆಗಿನ ತೀರಾ ಕೆಳ ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ನದಿ ಮತ್ತು ತೊರೆಗಳ ದಂಡೆಗಳಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Wt., Ic.t 276.1840; Gamble, Fl. Madras 1:504.1997 (rep.ed.)Sasidharan, Biodiversity documentation for Kerala Plants, part 6, 181.2004;Saldanha, Fl. Karnataka 2:39.1996..

Top of the Page