ಮೀಲಿಯೋಸ್ಮ ಸಿಂಪ್ಲಿಸಿಫೋಲಿಯ (Roxb.) Walp. ssp. ಪಂಜೆನ್ಸ್ - ಸಾಬಿಯೇಸಿ

ಪರ್ಯಾಯ ನಾಮ : ಮೀಲಿಯೋಸ್ಮ ವೈಟಿಯೈ Planchon ex Brandis

Vernacular names : Tamil: ಚೆಂಪಕಂ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತವೆ ಮತ್ತು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗತ ಕೆಂಪು ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾದ ಆಕಾರ ಹೊಂದಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ದಟ್ಟವಾಗ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕೆಲವು ವೇಳೆ ಅಗ್ರದಲ್ಲಿ ದಟ್ಟವಾಗಿ ಗುಂಪಾಗಿರುವ ತರಹ ಕಾಣುತ್ತವೆ;ತೊಟ್ಟುಗಳು 1.8 – 3.5 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ಮೃದು ತುಪ್ಪಳದಿಂದ ಕೂಡಿರುತ್ತವೆ, ಮತ್ತು ಉಬ್ಬಿದ ಬುಡದ ಸಮೇತವಿರುತ್ತವೆ;ಪತ್ರಗಳು 7 – 21 X 2-8 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತ-ಚತುರಸ್ರದಿಂದ ಅಂಡವೃತ್ತ - ಭರ್ಜಿಯವರೆಗಿನ ಮಾದರಿಯ ಆಕಾರ, ಚೂಪಾದುದರಿಂದ ಕ್ರಮೇಣ ಚೂಪಾಗುವವರೆಗಿನ ರೀತಿಯ ತುದಿ ,ಚೂಪಾದುದರಿಂದ ಬೆಣೆಯಾಕಾರದವರೆಗಿನ ರೀತಿಯ ಬುಡ,ನಯವಾದ ಅಂಚು ಹೊಂದಿರುತ್ತವೆ,ಕೆಲವು ವೇಳೆ ಅಂಚು ಅಂತರವುಳ್ಳ ದಂತಿತ ಮಾದರಿಯಲ್ಲಿರುತ್ತದೆ;ಮೇಲ್ಮೈ ಕಾಗದವನ್ನೋಲುವ ರೀತಿಯಲ್ಲಿದ್ದು ಒಣಗಿದಾಗ ಪತ್ರಗಳು ಕಂದು ಬಣ್ಣ ಹೊಂದಿರುತ್ತವೆ,ಪತ್ರಗಳು ಮೇಲ್ಭಾಗದಲ್ಲಿ ಮಧ್ಯ ನಾಳ ಮತ್ತು ಇತರೆ ನಾಳಗಳು ದಟ್ಟ ಮೃದುತುಪ್ಪಳವನ್ನು ಹೊಂದಿದ್ದು ತಳ ಭಾಗದಲ್ಲಿ ಮೃದುತುಪ್ಪಳದಿಂದ ಕೂಡಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 7 ರಿಂದ 18 ಜೋಡಿಗಳಿದ್ದು,ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ, ಹೆಚ್ಚಿನ ಸಂಧರ್ಭಗಳಲ್ಲಿ ತಳಭಾಗದ ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸಹಜೀವಿ ಗೂಡಿನ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಒರಟಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಓರೆಯಾಗಿ ಎಲೆದಿಂಡಿಗೆ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು,ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ;ಹೂಗಳು ತೊಟ್ಟುರಹಿತವಾಗಿರುತ್ತವೆ;ಪತ್ರಕಗಳು ಇರುತ್ತವೆ
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರದಲ್ಲಿರುತ್ತವೆ;ಬೀಜಗಳ ಸಂಖ್ಯೆ 1 ಇದ್ದು ಸುಕ್ಕುಸುಕ್ಕಾದ ಮೇಲ್ಮೈ ಹೊಂದಿರುತ್ತವೆ.

ಜೀವಪರಿಸ್ಥಿತಿ :

800 ಮತ್ತು 2200 ಮೀ. ನಡುವಿನ ಮಧ್ಯಮ ಮತ್ತು ಅತಿಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ (ದಕ್ಷಿಣ ಮಲೆನಾಡಿನವರೆಗೆ)ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Blumea 19: 466.1971; Gamble, Fl. Madras 1: 256. 1997 (re. ed); Sasidharan, Biodiversity documentation for Kerala- Flowering Plants, part 6: 110. 2004; Cooke, Fl. Bombay 1: 271.1903.

Top of the Page