ಮಿಯೋಗೈನ್ ರಾಮರೋವಿಯೈ (Dunn.) Gandhi - ಅನೋನೇಸಿ

Synonym : ಯುನೋನ ರಾಮರೋವಿಯೈ Dunn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಪೊದೆಗಳು ಅಥವಾ 6 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಒರಟಾದ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುವಂತಹವೂ ಹಾಗೂ ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ.; ಎಲೆ ತೊಟ್ಟುಗಳು 0.3 ರಿಂದ 0.5 ಸೆಂ.ಮೀ. ಉದ್ದವಿರುತ್ತವೆ. ಎಲೆ ಪತ್ರ 5 - 15 × 3 - 7 ಸೆಂ.ಮೀ. ಆಕಾರದಲ್ಲಿ ಅಂಡವೃತ್ತದಿಂದ ಇಕ್ಕಟ್ಟಾದ ಅಂಡಾಕಾರದಲ್ಲಿದ್ದು ಕ್ರಮೇಣ ಚೂಪಾಗುವ ಬಾಲರೂಪಿ ತುದಿಯನ್ನು ಹೊಂದಿರುತ್ತವೆ. ತುದಿ ಮೊಂಡಾದ ಮೊನಚು ಮುಳ್ಳನ್ನು ಹೊಂದಿರುತ್ತದೆ (ಚೂಪಾದ ಭಾಗ 0.8 ರಿಂದ 2.2 ಸೆಂ.ಮೀ. ಉದ್ದವಿರುತ್ತದೆ); ಎಲೆಯ ಬುಡ ಚೂಪಾಗಿರುವುದರಿಂದ ಹಿಡಿದು ಗುಂಡಾಕಾರದವರೆವಿಗೆ ಇರುತ್ತದೆ ; ಎಲೆ ಪತ್ರದ ಮೇಲ್ಭಾಗ ರೋಮರಹಿತವಾಗಿರುತ್ತದೆ. ಎಳೆಯ ಎಲೆಯ ಅಂಚು ಸ್ಪಂದನಾಶೀಲ ರೋಮಗಳಿಂದ ಕೂಡಿರುತ್ತವೆ. ಪತ್ರದ ಮೇಲ್ಮೈ ಕಾಗದವನ್ನು ಹೋಲುವಂತಿರುತ್ತದೆ. ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದ ಮಧ್ಯನಾಳವಿದ್ದು ಒರಟಾದ ರೋಮಸಹಿತವಾಗಿರುತ್ತವೆ.; ಎರಡನೇ ದರ್ಜೆಯ ನಾಳಗಳು 6 ರಿಂದ 8 ಧೃಢವಾದ ಜೋಡಿಗಳಿದ್ದು ಆರೋಹಣವು ವ್ಯವಸ್ಥೆಯಲ್ಲಿರುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಒಂಟಿಯಾಗಿ ತೊಟ್ಟುರಹಿತವಾಗಿದ್ದು ಅಕ್ಷಾಕಂಕುಳಿನಲ್ಲಿರುತ್ತವೆ ಹಾಗೂ ಕೆನೆಬಣ್ಣದ ಮಖಮಲ್ಲನ್ನು ಹೋಲುವ ದಟ್ಟವಾದ ಮೃದು ತುಪ್ಪಳ ಸಹಿತವಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗುಂಪಾಗಿದ್ದು ಕೆಲವೇ ಬೀಜಗಳನ್ನೂ ಹಾಗೂ ತೊಟ್ಟು ತೀರ ಸಣ್ಣದಾಗಿದ್ದು ಮಣಿಗಳ ಹಾಗೂ ನಿಯಮಿತವಾಗಿ ಜೋಡಿಸಲ್ಪಟ್ಟ ಊದಿದ ಗಂಟುಗಳನ್ನು ಹೊಂದಿದ್ದು ಮತ್ತು ಒರಟಾದ ತುಪ್ಪಳವನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

300 ರಿಂದ 1200ಮೀ. ಎತ್ತರದವೆರೆಗಿನ ತೇವಾಂಶಯುಕ್ತ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತವೆ.

ವ್ಯಾಪನೆ :

ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಬೆಳೆಯುವ ಈ ಸಸ್ಯ ಪಶ್ಚಿಮ ಘಟ್ಟಕ್ಕೆ ಸೀಮಿತ.

ಗ್ರಂಥ ಸೂಚಿ :

Saldanha and Nicolson, Fl. Hassan Dist. 38. 1976; Gamble, Fl. Madras 1: 15.1997 (re.ed); Sasidharan, Biodiversity documentation for Kerala- Flowering Plants, part 6: 17. 2004; Saldanha, Fl. Karnataka 1: 44. 1996; Keshava Murthy and Yoganarasimhan, Fl. Coorg (Kodagu) 31-32. 1990.

Top of the Page