ಮಲ್ಲೋಟಸ್ ಸುಬ್ರಮಣ್ಯಮಿಯೈ Ellis - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 6 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಪ್ಪಟೆಯಾಗಿದ್ದು, ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ಎಳೆಯದಾಗಿದ್ದಾಗ ವಿರಳವಾದ ಕಂದು ಬಣ್ಣದ ಸೂಕ್ಷ್ಮ ನಕ್ಷತ್ರ- ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ ಮತ್ತು ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿದ್ದು ಅಸಮ ಜೋಡಿಗಳನ್ನೊಳಗೊಂಡಿರುತ್ತವೆ; ಕಾವಿನೆಲೆಗಳು ಗುರುತು ಉಳಿಸಿ ಉದುರುವ ಮಾದರಿಯಲ್ಲಿರುತ್ತವೆ; ತೊಟ್ಟುಗಳು 5 ಸೆಂ.ಮೀ. ವರೆಗಿನ ಉದ್ದವಿದ್ದು ದುಂಡಾಗಿರುತ್ತವೆ ಮತ್ತು ಹಳದಿ ಅಂಟು ರಸಗ್ರಂಥಿ ಸಮೇತವಿರುತ್ತವೆ;ಎಲೆಗಳ ತಳಭಾಗದ ಬುಡ ಮತ್ತು ತೊಟ್ಟು ಸಂಧಿಸುವ ಜಾಗದಲ್ಲಿ ಒಂದು ಜೋಡಿ ರಸಗ್ರಂಥಿಗಳಿರುತ್ತವೆ. ಪತ್ರಗಳು 27 X 12 ಸೆಂ. ಮೀ. ವರೆಗಿನ ಗಾತ್ರದಲ್ಲಿದ್ದು, ಭರ್ಜಿಯಿಂದ ಹಿಡಿದು ಅಂಡವೃತ್ತದವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಉದ್ದನೆಯ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ದುಂಡಗಿನ ತುದಿಯಲ್ಲಿಕಚ್ಚುಳ್ಳ ಮಾದರಿಯದಾಗಿರುತ್ತದೆ ಅಥವಾ ದುಂಡಾಗಿರುತ್ತದೆ;ಅಂಚು ಅನಿಯತವಾದ ವಂಕಿ-ದಂತಿತ ಮಾದರಿಯಲ್ಲಿರುತ್ತದೆ;ಪತ್ರಗಳ ತಳ ಭಾಗದಲ್ಲಿ ಅಂಟುಸಹಿತವಾದ ಹಳದಿ ಬಣ್ಣದ ರಸಗ್ರಂಥಿಗಳು ಇರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 15 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳು. ಪುಷ್ಪಮಂಜರಿ ಬಹುತೇಕವಾಗಿ ತುದಿ ಅಥವಾ ಅಕ್ಷಾಕಂಕುಳಿನಲ್ಲಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳವನ್ನು ಹೊಂದಿರುತ್ತದೆ.ಗಂಡು ಹೂಗಳು ತೆಳು ಹಸಿರು ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಪ್ರಮುಖವಾದ ಹಾಗೂ ಗಡುಸಾದ ತರಕಲು ಗುಬುಟುಗಳನ್ನು ಹೊಂದಿದ್ದು ಕಂದು ಬಣ್ಣದಲ್ಲಿದ್ದು ಹಳದಿ ಬಣ್ಣದ ಅಂಟು ರಸ ಗ್ರಂಥಿಗಳ ಸಮೇತವಿರುತ್ತವೆ; ಪ್ರತಿ ಕೋಶದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ಉನ್ನತ ಎತ್ತರದ 1350 ಮತ್ತು 1800 ಮೀ.ನಡುವಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ನೀಲಗಿರಿ ಪ್ರದೇಶದಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Bull. Bot. Surv. India 25: 199-201. 1983.

Top of the Page