ಮಲ್ಲೋಟಸ್ ರಾಮ್ನಿಫೋಲಿಯಸ್ Muell.-Arg. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ನಕ್ಷತ್ರ-ರೋಮಸಹಿತವಾಗಿರುತ್ತವೆ .
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖದಿಂದ ಉಪಅಭಿಮುಖ ಹಾಗೂ– ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು 1 ರಿಂದ 5 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಹಾಗೂ ನಕ್ಷತ್ರ-ರೋಮಸಹಿತವಾಗಿರುತ್ತವೆ; ಪತ್ರಗಳು 10.5 -23 X 5.3 – 13 ಸೆಂ. ಮೀ. ಗಾತ್ರದಲ್ಲಿದ್ದು,ಅಂಡಾಕಾರದಲ್ಲಿರುತ್ತವೆ;ಪತ್ರಗಳ ತುದಿ ಚೂಪಾಗಿರುವುದರಿಂದ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ದುಂಡಾಗಿರುತ್ತದೆ;ಅಂಚು ನಯ ಅಥವಾ ಸ್ವಲ್ಪ ಮಟ್ಟಿಗೆ ವಂಕಿಯ ರೀತಿಯ ದಂತಿತ ಮಾದರಿ ಹೊಂದಿರುತ್ತದೆ; ಪತ್ರದ ತಳಭಾಗದಲ್ಲಿ ಹಳದಿ ಬಣ್ಣದ ರಸ ಗ್ರಂಥಿಗಳಿರುತ್ತವೆ;ಪತ್ರದ ಬುಡದಲ್ಲಿ 3 ನಾಳಗಳಿರುತ್ತವೆ; ಎರಡನೇ ದರ್ಜೆಯ ನಾಳಗಳು ಅಂದಾಜು 6 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ;ಮತ್ತು ಅಕ್ಷಾಕಂಕುಳಿನಲ್ಲಿನ ಕದಿರುಮಂಜರಿಯಲ್ಲಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು 3 ಕೋಶಗಳನ್ನು ಹೊಂದಿದ್ದು ಸೂಕ್ಷ್ಮವಾದ ನಕ್ಷತ್ರ ರೋಮಗಳಿಂದ ಆವೃತವಾಗಿರುತ್ತವೆ; ಬೀಜಗಳು 3 ಇದ್ದು ಕಂದು ಬಣ್ಣ ಹೊಂದಿರುತ್ತವೆ.

ಜೀವಪರಿಸ್ಥಿತಿ :

ಒಣ ನಿತ್ಯಹರಿದ್ವರ್ಣದಿಂದ ಅರೆ ನಿತ್ಯ ಹರಿದ್ವರ್ಣವರೆಗಿನ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ ಮತ್ತು ಶ್ರೀ ಲಂಕಾ; ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Linnaea 34: 196.1865; Gamble, Fl.Madras 2:1323.1993 (rep.ed.); Sasidharan, Biodiversity documentation for Kerala – Flowering plants, part 6, 424.2004.

Top of the Page