ಮಕರಂಗ ಪೆಲ್ಟೇಟ (Roxb.) Mueller - ಯೂಫೊರ್ಬಿಯೇಸಿ

:

ಕನ್ನಡದ ಪ್ರಾದೇಶಿಕ ಹೆಸರು : ಮಕರಂಗ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಕಂದು ಬಣ್ಣದಲ್ಲಿದ್ದು ಸಣ್ಣ ವಾಯುವಿನಿಮಯ ರಂಧ್ರಗಳಿಂದ ಕೂಡಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಧೃಡವಾಗಿರುತ್ತವೆ ಮತ್ತು ಉಪ-ರೋಮರಹಿತವಾಗಿದ್ದು ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತವೆ.
ಜಿನುಗು ದ್ರವ : ಕತ್ತರಿಸಿದ ಕವಲುಗಳ ಮತ್ತು ಕಿರುಕೊಂಬೆಗಳ ತುದಿಯಲ್ಲಿ ಕೆಂಪು ಅಂಟು ಸಸ್ಯ ರಸ ಸ್ರವಿಸುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಕಾವಿನೆಲೆಗಳು 1.2 ಸೆಂ.ಮೀ. ಉದ್ದವಿದ್ದು ಭರ್ಜಿಯ ಆಕಾರದಲ್ಲಿದ್ದು ಉದುರಿ ಹೋಗುವಂತವು; ತೊಟ್ಟುಗಳು 7 –26 ಸೆಂ.ಮೀ.ವರೆಗಿನ ಉದ್ದವಿದ್ದು ದುಂಡಗಿರುತ್ತವೆ ಮತ್ತು ಉಪ-ರೋಮರಹಿತವಾಗಿದ್ದು ಬುಡದಲ್ಲಿ ಊದಿಕೊಂಡಿರುತ್ತವೆ; ರೀಯದಾಗಿರುತ್ತವೆ; ಪತ್ರಗಳು 13 -32 X 8 -18 ಸೆಂ. ಮೀ. ವರೆಗಿನ ಗಾತ್ರದಲ್ಲಿದ್ದು ಪ್ರಮುಖವಾಗಿ ತಳಭಾಗದ ಮಧ್ಯದಲ್ಲಿರುವ ತೊಟ್ಟನ್ನು ಹೊಂದಿರುತ್ತವೆ ; ಪತ್ರಗಳ ಆಕಾರ ಅಂಡದಿಂದ ವೃತ್ತವನ್ನು ಹೋಲುತ್ತವೆ;ತುದಿ ಕ್ರಮೇಣವಾಗಿ ಚೂಪಾಗುವ ಅಥವಾ ಕೆಲವು ವೇಳೆ ಚೂಪಾದ ಮಾದರಿಯಲ್ಲಿರುತ್ತವೆ.ಪತ್ರದ ಅಂಚು ಸೂಕ್ಷ್ಮ ದಂತಿತವಾಗಿರುತ್ತದೆ; ಮೇಲ್ಮೈ ಉಪ- ತೊಗಲ್ಲನ್ನೋಲುವ ಮಾದರಿಯಲ್ಲಿದ್ದು ಪತ್ರದ ಮೇಲ್ಭಾಗ ರೋಮರಹಿತವಾಗಿರುತ್ತದೆ ಮತ್ತು ತಳಭಾಗ ಮೃದುತುಪ್ಪಳದಿಂದ ಕೂಡಿದ್ದು ಅಂಟುಸಹಿತವಾದ ಹಳದಿ ಬಣ್ಣದ ರಸಗ್ರಂಥಿಗಳ ಸಮೇತವಿರುತ್ತದೆ;ನಾಳಗಳು 10ರವರೆಗೆ ಇದ್ದು ಮಧ್ಯದಿಂದ ಹರಡುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು. .
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ಪುಷ್ಪಮಂಜರಿಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು ನೆಟ್ಟನೆಯ ಕವಲುಗಳನ್ನು ಹೊಂದಿರುತ್ತವೆ; ಹೂಗಳ ಪತ್ರಕಗಳು ವಿಶಾಲ ಅಂಡಾಕೃತಿ ಹೊಂದಿದ್ದು ಅಗ್ರ ರಸಗ್ರಂಥಿ ರಹಿತವಾದ ದಂತಿತವಾದ ಅಂಚನ್ನು ಹೊಂದಿರುತ್ತವೆ; ಗಂಡು ಹೂಗಳು ಪ್ರತಿ ಹೂ-ಪತ್ರಕದಲ್ಲಿನ ಗುಚ್ಛಗಳಲ್ಲಿ ಇರುತ್ತವೆ; ಪ್ರತಿ ಹೂ -ಪತ್ರಕ್ಕೆ ಕೆಲವು ಹೆಣ್ಣು ಹೂಗಳನ್ನೊಳಗೊಂಡ ಗುಚ್ಛಗಳು ಇರುತ್ತವೆ.
ಕಾಯಿ /ಬೀಜ : ಸಂಪುಟ ಫಲ ಗೋಳಾಕಾರದಲ್ಲಿದ್ದು ರಸಗ್ರಂಥಿ ಸಮೇತವಾದ ಶಲ್ಕೆಗಳಿಂದ ಆವೃತವಾಗಿರುತ್ತದೆ ಮತ್ತು 1 ಅಥವಾ 2 ಹಾಲೆಗಳುಳ್ಳ ಮರಿಫಲಗಳನ್ನೊಳಗೊಂಡಿರುತ್ತದೆ;ಬೀಜಗಳು ಗೋಳಾಕಾರದವುಗಳಾಗಿದ್ದು ಪ್ರತಿ ಮರಿಫಲದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ನಿತ್ಯ ಹರಿದ್ವರ್ಣ ಕಾಡುಗಳ ತೆರೆದ ಭಾಗಗಳಲ್ಲಿ ಸೂರ್ಯವರ್ತ ಮರಗಳಾಗಿ ಈ ಪ್ರಭೇದ ಸಾಮಾನ್ಯವಾಗಿ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀ ಲಂಕಾ;ಪಶ್ಚಿಮ ಘಟ್ಟದ ಎಲ್ಲೆಡೆ ಈ ಸಸ್ಯ ಬೆಳೆಯುತ್ತದೆ.

ಗ್ರಂಥ ಸೂಚಿ :

De Candolle, Prodr. 15(2)1010.1866;Gamble, Fl.Madras 2:1326.1993 (rep.ed.) ; Sasidharan, Biodiversity documentation for Kerala – Flowering plants, part 6, 421.2004;Saldanha, Fl. Karnataka 2;150.1996.

Top of the Page