ಲಿಟ್ಸಿಯ ಮೈಸೂರೆನ್ಸಿಸ್ Gamble - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ವ್ಯವಸ್ಥೆಯಲ್ಲಿ ಇರುತ್ತವೆ. ಎಲೆಗಳು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ;ತೊಟ್ಟುಗಳು 0.5-1ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ; ಪತ್ರಗಳು 6.5-12.5 X1.5-3 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ರೇಖಾತ್ಮಕ ಭರ್ಜಿಯಿಂದ ರೇಖಾತ್ಮಕ ಅಂಡವೃತ್ತದವರೆಗಿನ ಆಕಾರ ಹೊಂದಿರುತ್ತವೆ ;ತುದಿ ಸಂಕುಚಿತ ಚೂಪಿನಿಂದ ಕ್ರಮೇಣ ಚೂಪಾಗುವ ರೀತಿಯಲ್ಲಿರುತ್ತದೆ;ಬುಡ ಸಂಕುಚಿತ- ಚೂಪಾಗಿರುತ್ತದೆ;ಅಂಚು ನಯವಾಗಿರುತ್ತದೆ; ಪತ್ರಗಳು ರೋಮರಹಿತವಾಗಿದ್ದು ತಳಭಾಗದಲ್ಲಿ ಮಾಸಿದ ಬೂದು ಹಸಿರು ಬಣ್ಣ ಹೊಂದಿರುತ್ತದೆ; ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6-7 ಜೋಡಿಗಳಿರುತ್ತವೆ ಮತ್ತು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಪೀಠಛತ್ರಗಳಾಗಿದ್ದು ಅಕ್ಷಾಕಂಕುಳಿನಲ್ಲಿನ ಮತ್ತು ವೃಂತರಹಿತ ಅಥವಾ ಕಿರು ವೃಂತವುಳ್ಳ ಗುಚ್ಛಗಳಲ್ಲಿರುತ್ತವೆ ;ಹೂಗಳು ಏಕಲಿಂಗಿಗಳು.
ಕಾಯಿ /ಬೀಜ : ಬೆರ್ರಿ ಅಂಡವೃತ್ತಾಕಾರದಲ್ಲಿದ್ದು ವಿಕಸಿತವಾದ ಪುಷ್ಪಾವರಣದ ಬಟ್ಟಲಿನ ಮೇಲೆ ಆಸಿನವಾಗಿರುತ್ತದೆ ಮತ್ತು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

200 ಮತ್ತು 1800 ಮೀ. ನಡುವಿನ ಕೆಳ ಮತ್ತು ಉನ್ನತ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಪ್ರಭೇದ ಸಾಮಾನ್ಯವಾಗಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಸ್ಥಿತಿ :

ಅಪರೂಪ ಮತ್ತು ದುರ್ಬಲ ಸ್ಥಿತಿ (ahmedulalh & Nayar1987).

ಗ್ರಂಥ ಸೂಚಿ :

Gamble, Bull. Misc. Inform. Kew 1925: 130. 1925; Gamble, Fl. Madras 2: 1236. 1993 (re. ed); Sasidharan, Biodiversity documentation for Kerala- Flowering Plants, part 6: 399. 2004; Saldanha, Fl. Karnataka 1: 69. 1996.

Top of the Page