ಲಿಯ ಇಂಡಿಕ (Burm.f.) Merr. - ಲಿಯ ಇಂಡಿಕ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಪೊದೆಗಳು ಅಥವಾ 5 ಮೀ.ವರೆವಿಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡಗಳು ಹಲವಾರಿನಿಂದ ಒಂಟಿಯಾಗಿರುತ್ತವೆ ಮತ್ತು ಹಲವು ಸಂಧರ್ಭಗಳಲ್ಲಿ ದಂಟು ಬೇರುಗಳ ಸಮೇತವಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿದ್ದು ಉದುರು ರೋಮ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳುಸಂಯುಕ್ತ ಮಾದರಿಯಲ್ಲಿದ್ದು ದ್ವಿಗರಿಯಿಂದ ತ್ರಿಗರಿ ರೂಪ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಎಲೆಗಳ ಅಕ್ಷದಿಂಡು 10 ರಿಂದ 20 ಸೆಂ.ಮೀ.ಉದ್ದವಿರುತ್ತದೆ;ಕಿರುತೊಟ್ಟುಗಳು 0.5 ರಿಂದ 2.5 ಸೆಂ.ಮೀ. ಉದ್ದವಿರುತ್ತವೆ;ಕಾವಿನೆಲೆಗಳು ಕೆನ್ನೀಲಿ ಬಣ್ಣದಲ್ಲಿದ್ದು ಒರೆ ರೂಪದ ಕೋಶವುಳ್ಳ -ದ್ದಾಗಿರುತ್ತವೆ ಮತ್ತು ಬುಗುರಿ-ಚತುರಸ್ರದ ಆಕಾರದಲ್ಲಿದ್ದು ರೋಮರಹಿತವಾಗಿರುತ್ತವೆ; ಕಿರುಎಲೆಗಳು 6-21X 3.5-7.5 ಸೆಂ.ಮೀ. ಗಾತ್ರ ಹೊಂದಿದ್ದು, ಅಂಡದಿಂದ ಭರ್ಜಿವರೆಗಿನ ಆಕಾರದಲ್ಲಿರುತ್ತವೆ; ಪತ್ರದ ತುದಿ ಕ್ರಮೇಣ ಚೂಪಾಗುವುದರಿಂದ ಬಾಲರೂಪಿವರೆಗಿನ ಮಾದರಿಯಲ್ಲಿದ್ದು,ಪತ್ರದ ಬುಡ ಚುಪಾಗಿರುವುದರಿಂದ ದುಂಡಾದ ರೀತಿಯ -ವರೆಗಿರುತ್ತದೆ; ಅಂಚು ಗರಗಸ ದಂತಿತದಿಂದ ದಂತಿತ ಮಾದರಿಯವರೆಗಿರುತ್ತದೆ; ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತದೆ ಮತ್ತು ಒಣಗಿದಾಗ ಕಂದು ಬಣ್ಣ ಹೊಂದಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 7 -12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ನೀಳಛತ್ರ ಮಧ್ಯಾರಂಭಿ ರೀತಿಯವು;ಪುಷ್ಪಪಾತ್ರೆ ಹಸಿರಾಗಿದ್ದು ಪುಷ್ಪದಳ ಕೆನೆ ಬಣ್ಣ ಹೊಂದಿರುತ್ತದೆ.
ಕಾಯಿ /ಬೀಜ : ಬೆರ್ರಿಗಳು ಅದುಮಿದ ಹಾಗಿರುವ ಗೋಳಾಕಾರದಲ್ಲಿದ್ದು ಅಂದಾಜು 0.7 ಸೆಂ.ಮೀ. ಅಡ್ಡಗಳತೆ ಹೊಂದಿರುತ್ತವೆ ಮತ್ತು ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿದ್ದು 4 ರಿಂದ 6 ಬೀಜಗಳನ್ನೊಳ -ಗೊಂಡಿರುತ್ತವೆ.

ಜೀವಪರಿಸ್ಥಿತಿ :

ಎರಡನೇ ದರ್ಜೆಯ ಮತ್ತು ಭಗ್ನಗೊಂಡ ನಿತ್ಯಹರಿದ್ವರ್ಣ ಕಾಡುಗಳ ಒಳಗೆ ಈ ಪ್ರಭೇದ ಸಾಮಾನ್ಯವಾಗಿ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯ,ಇಂಡೋಚೈನ, ಆಸ್ಟ್ರೇಲಿಯ ಮತ್ತು ಪೆಸಿಫಿಕ್ ದ್ವೀಪಗಳು; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Philipp,J.Sci. 14. 245;Gamble, Fl. Madras 1:240.1997(rep.ed.); Saldanha,Fl.Karnataka 2:174.1996;Sasidharan, Biodiversity documentation for Kerala – Flowering plants, part 6:106.2004.

Top of the Page