ಕಿಂಗಿಯೋಡೆಂಡ್ರಾನ್ ಪಿನ್ನೇಟಮ್ (Roxb. ex DC) Harms - ಸಿಸಾಲ್ಪಿನಿಯೇಸಿ

Synonym : ಹಾರ್ಡ್ವಿಕ್ಕಿಯ ಪಿನ್ನೇಟ Roxb. ex DC.

ಕನ್ನಡದ ಪ್ರಾದೇಶಿಕ ಹೆಸರು : ಎಣ್ಣೆಮರ, ಜೇನು ಎಣ್ಣೆ ಮರ, ಹೆಣ್ಣುಎಣ್ಣೆಮರ, ಚೌಪೈನೆಮರ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ಚಕ್ಕೆರೂಪದಲ್ಲಿರುತ್ತವೆ ಮತ್ತು ಕಚ್ಚು ಮಾಡಿದ ಭಾಗ ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು ಹಾಗೂ ದುಂಡಾಗಿದ್ದು ರೋಮರಹಿತವಾಗಿರುತ್ತದೆ.
ಜಿನುಗು ದ್ರವ : ಮರವನ್ನು ಕಡಿದಾಗ ತೈಲರೂಪದ ಅಂಟು ದ್ರವಿಸುತ್ತದೆ.
ಎಲೆಗಳು : ಎಲೆಗಳು ಅಸಮ ಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯಲ್ಲಿದ್ದು ಪರ್ಯಾಯ ಜೋಡನಾ ವ್ಯವಸ್ಥೆ ಹೊಂದಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ಕಾವಿನೆಲೆಗಳು ಉದುರುವಂತಹವು; ಅಕ್ಷದಿಂಡು ಉಬ್ಬಿದ ಬುಡಸಮೇತವಿದ್ದು, ದುಂಡಾಕಾರವಾಗಿದ್ದು 6 ರಿಂದ 10 ಸೆ.ಮೀ. ಉದ್ದವಾಗಿರುತ್ತದೆ; ಕಿರು ಎಲೆ ತೊಟ್ಟುಗಳು 0.3 ರಿಂದ 0.7 ಸೆ.ಮೀ. ಉದ್ದ ಹೊಂದಿರುತ್ತವೆ. ಅಗ್ರದಲ್ಲಿರುವ ಕಿರು ಎಲೆಯ ಬುಡದಲ್ಲಿ ದಬ್ಬಳದಾಕಾರದಲ್ಲಿರುವ ರಸಗ್ರಂಥಿಯನ್ನೋಲುವ ರಚನೆಯನ್ನು ಕಿರು ಎಲೆ ತೊಟ್ಟು ಹೊಂದಿರುತ್ತದೆ; ಕಿರುಎಲೆಗಳು 4 ರಿಂದ 7, ಪರ್ಯಾಯವಾಗಿ ಜೋಡಿಸಿರುತ್ತವೆ, ಕಿರುಎಲೆಗಳ ಪತ್ರಗಳು 4.5 – 9 x 1.7 – 4.5 ಸೆಂ.ಮೀ. ಗಾತ್ರ ಹೊಂದಿದ್ದು, ಅಸಮ್ಮಿತಿ – ಕುಡುಗೋಲಿನಾಕಾರ ಅಥವಾ ಇಕ್ಕಟ್ಟಾದ ಚತುರಸ್ರಾಕಾರದವರೆಗಿನ ಆಕಾರ ಹೊಂದಿದ್ದು, ಬಾಲರೂಪಿ ಕ್ರಮೇಣ ಚೂಪಾಗುವ ತುದಿ, ದುಂಡಾದ ಅಥವಾ ಚೂಪಾದ ಬುಡಭಾಗ ಹೊಂದಿರುತ್ತವೆ, ಅಂಚುಗಳು ನಯವಾಗಿರುತ್ತವೆ, ಕಿರುಪತ್ರ ಕಾಗದವನ್ನೋಲುವಂತಿದ್ದು ಅಸ್ಪಷ್ಟವಾದ ಪ್ರಕಾಶಭೇಧ್ಯ ಮಚ್ಚೆಗಳನ್ನೊಳಗೊಂಡಿರುತ್ತದೆ; ಮಧ್ಯನಾಳ ಕೊಂಚ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 10 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಜಾಲಯಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಚಿಕ್ಕಗಾತ್ರ ಹೊಂದಿದ್ದು, ಶ್ವೇತ ವರ್ಣದಲ್ಲಿದ್ದು ಬಹುಸಂಖ್ಯೆಯಲ್ಲಿದ್ದು ಕವಲೊಡೆದ ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಪಾಡುಗಳು 3.5 x 3 ಸೆ.ಮೀ. ಗಾತ್ರ ಹಾಗೂ ಅಂಡವೃತ್ತಾಕೃತಿ ಅಥವಾ ಚತುರಸ್ರ ಆಕಾರ ಹೊಂದಿದ್ದು, ತೊಟ್ಟಿನ ಕಡೆಗೆ ಚಪ್ಪಟೆಯಾಗಿರುತ್ತದೆ ಹಾಗೂ ತುದಿಯಲ್ಲಿ ಕೊಕ್ಕನ್ನು ಹೊಂದಿರುತ್ತದೆ. ಮೇಲ್ಮೈ ತೊಗಲನ್ನೋಲುವಂತಹವು; ಕಾಯಿಗಳು ಅದುಮಿದಂತಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ.

ಜೀವಪರಿಸ್ಥಿತಿ :

200 ಮೀ. ವರೆಗಿನ ಕಡಿಮೆ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳಿಗೆ ಸೀಮಿತ – ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ (ಕೊಡಗು ಪ್ರದೇಶದವರೆಗೆ) ಯಲ್ಲಿ ಈ ಪ್ರಭೇದ ಕಾಣ ಸಿಗುತ್ತದೆ.

ಗ್ರಂಥ ಸೂಚಿ :

Engler & Prantl, Nat. Pflanzenf. 1:194. 1897; Gamble, Fl. Madras 1:412. 1997 (re.ed); Sasidharan, Biodiversity documentation for Kerala - Flowering Plants, part 6:156. 2004; Saldanha, Fl. Karnataka 1:391. 1996.

Top of the Page