English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 35 ಮೀ ಎತ್ತರದವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಪ್ಪಾಗಿದ್ದು ಪದರ ಕಳಚುವ ರೀತಿಯಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣ ಹೊಂದಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ತೊಟ್ಟುಗಳು ರೋಮರಹಿತವಾಗಿದ್ದು 1 – 3 ಸೆಂ.ಮೀ.ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತವೆ; ಪತ್ರಗಳು 11.5X6.5 ಸೆಂ.ಮೀ ಗಾತ್ರ ಹೊಂದಿದ್ದು,ಅಂಡಾಕಾರದಲ್ಲಿದ್ದು ಕಿರಿದಾದ ಬಾಲರೂಪಿ-ಕ್ರಮೇಣ ಚೂಪಾಗುವ ತುದಿ ಮತ್ತು ಚೂಪಾದ ಬುಡ ಹೊಂದಿರುತ್ತವೆ, ಪತ್ರಗಳು ರೋಮರಹಿತ ಹಾಗೂ ಹೊಳಪುಳ್ಳದ್ದಾಗಿರುತ್ತವೆ; ಸಹಜೀವಿ ಗೂಡುಗಳು ಪತ್ರದ ತಳಭಾಗದ ಎರಡನೇ ದರ್ಜೆಯ ನಾಳಗಳ ಅಕ್ಷಾಕಂಕುಳಿನಲ್ಲಿರುತ್ತವೆ.ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 4-5 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ 7.5 ರಿಂದ 10 ಸೆಂ.ಮೀ. ಉದ್ದದ, ಅಕ್ಷಾಕಂಕುಳಿನಲ್ಲಿರುವ ಅಥವಾ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು. ಹೂಗಳು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿದ್ದು ನಸುಗೆಂಪಿನ ಛಾಯೆ ಹೊಂದಿರುತ್ತವೆ. |
| ಕಾಯಿ /ಬೀಜ : | ಕರಟ ಮಾದರಿಯ ಕಾಯಿಗಳು ವೃದ್ಧಿಸಿದ ಪುಷ್ಪಪಾತ್ರೆ ಸಮೇತವಿದ್ದು ಒಂದು ಬೀಜವನ್ನೊಳಗೊಂಡಿರುತ್ತವೆ. |