ಹೋಲಿಗಾರ್ನ ಆರ್ನಾಟಿಯಾನ J.Hk. - ಅನಕಾರ್ಡಿಯೇಸಿ

Synonym : ಹೋಲಿಗಾರ್ನ ಲಾಂಜಿಫೋಲಿಯ Wt. & Arn.

ಕನ್ನಡದ ಪ್ರಾದೇಶಿಕ ಹೆಸರು : ಕಟುಗೇರು,ಕುಟಿಗೇರು,ಕೂಟಗೇರು,ಕಾಡುಗೇರು,ಹೊಲಗೇರು,ಹುಲ್ಗೇರಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆವಿಗೆ ಬೆಳೆಯುವ ದೊಡ್ಡ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಸೂಕ್ಶ್ಮವಾಗಿ ಬಿರಿದ ಹಾಗೂ ಬೊಕ್ಕೆಗಳನ್ನುಳ್ಳ ಮೇಲ್ಮೈಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು “ಆಬ್ರೆವಿಲ್ಲೆ” ಮಾದರಿಯ ವಿನ್ಯಾಸ ಹೊಂದಿದ್ದು, ಕಿರುಕೊಂಬೆಗಳು ಬಲಿಷ್ಟವಾಗಿದ್ದು, ಗುಂಡಾಕೃತಿಯಲ್ಲಿದ್ದು, ರೋಮರಹಿತವಾಗಿರುತ್ತದೆ.
ಜಿನುಗು ದ್ರವ : ಸಸ್ಯರಸವು ಬೆಳ್ಳಗಿದ್ದು ನಂತರ ಕಪ್ಪಾಗುತ್ತದೆ
ಎಲೆಗಳು : ಎಲೆಗಳು ಸರಳ, ಪರ್ಯಾಯ – ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ.ಎಲೆತೊಟ್ಟು 0.8 ರಿಂದ 2.5 ಸೆಂ.ಮೀ. ಉದ್ದವಿದ್ದು, ಒಂದು ಜೋಡಿ ಚಾಚು-ಚೀಲವನ್ನು ಹೊಂದಿರುತ್ತದೆ( ಬಹುಮಟ್ಟಿಗೆ ರೋಮರಹಿತ, ಕೆಲವು ವೇಳೆ ಉದುರಿಹೋಗುತ್ತವೆ).ಎಲೆತೊಟ್ಟು ಅಡ್ಡಸೀಳಿದಾಗ ಸಪಾಟ ಪೀನ ಮಧ್ಯ ಆಕಾರದಲ್ಲಿರುತ್ತದೆ. ಎಲೆಪತ್ರ ಬುಗುರಿ-ಈಟಿ ಸಮ್ಮಿಶ್ರಾಕಾರದಲ್ಲಿದ್ದು 10 – 25 X2.5 -7.6 ಸೆಂ.ಮಿ. ಗಾತ್ರದಲ್ಲಿರುತ್ತವೆ. ಚೂಪಲ್ಲದ ಕೋನವುಳ್ಳ ತುದಿ ಅಥವಾ ಕ್ರಮೇಣ-ಚೂಪಾಗುವ ತುದಿ ಹಾಗೂ ಬೆಣೆಯಾಕಾರದ ಅಥವ ಕಾಂಡದವರೆವಿಗು ವಿಸ್ತಾರಗೊಳ್ಳುವ ಬುಡಭಾಗ, ನಯವಾದ ಅಂಚು,ತೊಗಲ್ಲನ್ನೋಲುವ ಮೇಲ್ಮೈ ಇದ್ದು ಪತ್ರಗಳು ರೋಮರಹಿತವಾಗಿರತ್ತವೆ. ಮಧ್ಯನಾಳಗಳು ಮೇಲುಬ್ಬರವನ್ನು ಹೊಂದಿರುತ್ತದೆ; 10ರಿಂದ 20 ಜೋಡಿ ಎರಡನೇ ದರ್ಜೆ ನಾಳಗಳಿದ್ದು ಮೂರನೇ ದರ್ಜೆ ನಾಳಗಳು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣಲಿಂಗಿ , ಹಸಿರು ಮಿಶ್ರಿತ ಬಿಳಿ ಬಣ್ಣದವುಗಳಾಗಿದ್ದು12 ರಿಂದ 24 ಸೆಂ.ಮಿ. ಉದ್ದದ,ಅಕ್ಷಾಕಂಕುಳಿನ ಅಥವಾ ತುದಿಯಲ್ಲಿರುವ ಹಳದಿ ಮೃದುತುಪ್ಪಳವನ್ನುಳ್ಳ, ಪುನರಾವೃತ್ತಿಯಾಗಿ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ
ಕಾಯಿ /ಬೀಜ : ಡ್ರೂಪ್ ಗಳು ರೋಮರಹಿತ, ಏಕಬೀಜ ಸಹಿತವಾಗಿದ್ದು, ಓರೆಯಾದ ಅಂಡಾಕಾರದಲ್ಲಿದ್ದು ಗುಂಡಾಕಾರದ ತುದಿಯನ್ನು ಹೊಂದಿರುತ್ತದೆ. ಕಾಯಿಗಳು ಸಂಪೂರ್ಣವಾಗಿ ತಲೆಕೆಳಗಾದ ಶಂಖುವನ್ನು ಹೋಲುವ ಹೈಪೋಕಾರ್ಪ್ ನಲ್ಲಿ ಹುದುಗಿರುತ್ತದೆ.

ಜೀವಪರಿಸ್ಥಿತಿ :

ಸಮುದ್ರಮಟ್ಟಕ್ಕಿಂತ 1200 ಮೀ ಎತ್ತರದವರೆಗಿನ ಪ್ರದೇಶಗಳ ಮೇಲ್ಛಾವಣಿಯಲ್ಲಿರುವ ಮರಗಳಾಗಿ ತೇವಾಂಶಯುಕ್ತ ನಿತ್ಯಹರಿದ್ವರ್ಣದಿಂದ ಅರೆನಿತ್ಯಹರಿದ್ವರ್ಣ ಕಾಡುಗಳು ಹಾಗೂ ತೇವಾಂಶಯುಕ್ತ ಎಲೆಯುದುರು ಕಾಡುಗಳಲ್ಲಿ ಬೆಳೆಯುತ್ತವೆ. ಪಶ್ಚಿಮಘಟ್ಟದ ಸಹ್ಯಾದ್ರಿಯ ಮಧ್ಯ ಭಾಗದಿಂದ ಹಿಡಿದು ದಕ್ಷಿಣಭಾಗದ ಪ್ರದೇಶಗಳಿಗೆ ಈ ಪ್ರಭೇಧ ಸೀಮಿತ.

ಗ್ರಂಥ ಸೂಚಿ :

Hooker, Fl. Brit. India 2:36.1876; Gamble , Fl. Madras1:268.1997(re.ed.); Saldanha, Fl.Karnataka 2: 204-205.1996; Cooke, Fl. Bombay 1:279.1902; Sasidharan, Bidiversity documentation for Kerala-Flowering plants, part 6: 111.2004

Top of the Page