ಹರ್ಪುಲಿಯ ಆರ್ಬೋರಿಯ (Blanco) Radlk. - ಸ್ಯಾಪಿಂಡೇಸಿ

ಪರ್ಯಾಯ ನಾಮ : ಹರ್ಪುಲಿಯ ಇಂಬ್ರಿಕೇಟ Thw.

Vernacular names : Tamil: ಚಿತ್ತಿಲಮದಕ್ಕು,ಪುಳುಕ್ಕೊಳ್ಳಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲುಗಳ ಸಮೇತವಿರುತ್ತದೆ;ತೊಗಟೆ ಬೂದು ಬಣ್ಣದಲ್ಲಿದ್ದು ಬೆಂಡು ರಂಧ್ರಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ,ಸೂಕ್ಷ್ಮ ಮೃದು ತುಪ್ಪಳದ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ,ಸಾಮಾನ್ಯವಾಗಿ ಸಮಗರಿ ರೂಪಿಗಳಾಗಿರುತ್ತವೆ,ಕೆಲವು ವೇಳೆ ಅಸಮಗರಿ ರೂಪಿಗಳಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ ಮತ್ತು 20 ರಿಂದ 40 ಸೆಂ.ಮೀ. ಉದ್ದವಿರುತ್ತವೆ;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು ದುಂಡಾಗಿರುತ್ತದೆ, ಎಳೆಯದಾಗಿದ್ದಾಗ ಹಳದಿ ಛಾಯೆಯುಳ್ಳ ಮೃದು ತುಪ್ಪಳದಿಂದ ಕೂಡಿರುತ್ತದೆ, ನಂತರ ರೋಮರಹಿತವಾಗಿರುತ್ತದೆ;ಉಪತೊಟ್ಟು 0.3 ರಿಂದ 0.7 ಸೆಂ.ಮೀ.ಉದ್ದವಿರುತ್ತದೆ,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತದೆ ಮತ್ತು ಸೂಕ್ಷ್ಮ ಮೃದು ತುಪ್ಪಳದಿಂದ ಕೂಡಿರುತ್ತದೆ;ಉಪಪತ್ರಗಳು 4 ರಿಂದ 5 ಜೋಡಿಗಳಿದ್ದು ಅಭಿಮುಖಿ, ಉಪಅಭಿಮುಖಿ ಅಥವಾ ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಗಾತ್ರದಲ್ಲಿ 5 -22 X 2.5 – 8 (-10) ಸೆಂ.ಮೀ. ಇದ್ದು,ಸಾಮಾನ್ಯವಾಗಿ ಮೇಲೆ ಹೋದಂತೆ ಗಾತ್ರ ಹೆಚ್ಚುತ್ತಾ ಹೋಗುತ್ತದೆ, ಸಾಮಾನ್ಯವಾಗಿ ಕೆಳಗಿನ ಕಿರುಎಲೆಗಳು ಸಂಕುಚಿತ ಅಂಡದ ಆಕಾರದಲ್ಲಿದ್ದು ಮೇಲಿನವು ಅಂಡವೃತ್ತ-ರೇಖಾತ್ಮಕದ ಆಕಾರದಲ್ಲಿರುತ್ತವೆ,ಕಿರು ಪತ್ರಗಳ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬುಡ ತುದಿ, ಅಸಮ್ಮಿತಿಯಾಗಿರುತ್ತದೆ, ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ,ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿದ್ದು, ಜೋತಾಡುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ;ತೊಟ್ಟುಗಳು ಅಂದಾಜು 3 ಸೆಂ.ಮೀ. ಉದ್ದ ಹೊಂದಿರುತ್ತದೆ.
ಕಾಯಿ / ಬೀಜ : ಸಂಪುಟ ಫಲ ಉಬ್ಬಿಕೊಂಡಿದ್ದು,ಕಿತ್ತಳೆ-ಕಡುಗೆಂಪು ಬಣ್ಣದಲ್ಲಿದ್ದು,,ಉದ್ದಕ್ಕಿಂತ ಹೆಚ್ಚು ಅಗಲವನ್ನು ಹೊಂದಿರುತ್ತದೆ, 2-ಕೋಶಗಳ ಸಮೇತವಿರುತ್ತದೆ ಮತ್ತು 2.5 X 5.5 ಸೆಂ.ಮೀ. ಗಾತ್ರ ಹೊಂದಿರುತ್ತದೆ;ಪ್ರತಿ ಕೋಶದಲ್ಲಿ 1 ರಿಂದ 2 ಕಪ್ಪು ಬಣ್ಣದ ಪತ್ರೆಯ ಸಮೇತವಾದ ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

1400 ಮೀ. ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಉಪಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಆಸ್ಟ್ರೇಲಿಯ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Radlk., Sitzungsber. Math.-Phys. Cl. Koenigl. Bayer. Akad. Wiss. Muenchen 16: 404. 1890; Gamble, Fl. Madras 1: 253. 1997 (re. ed); Sasidharan, Biodiversity documentation for Kerala- Flowering Plants, part 6: 108. 2004; Saldanha, Fl. Karnataka 2: 194. 1996; Cooke, Fl. Bombay 1:268. 1903.

Top of the Page