ಗೋರ್ಡೋನಿಯ ಒಬ್ಟ್ಯೂಸ Wall. ex Wt. & Arn. - ತಿಯೇಸಿ

ಪರ್ಯಾಯ ನಾಮ : ಗೋರ್ಡೋನಿಯ ಒಬ್ಟ್ಯೂಸಿಫೋಲಿಯ Wt.

Vernacular names : Tamil: ಅಟಂಗಿ,ಕರಿಕ್ಕೊವ,ಕಾಟ್ಟುಕರನ,ಓಲMalayalam: ನಾಗತೆ,ಮಲ್ಲಂಗ,ಮಲರಾಗ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದ ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಗಿದ್ದು, ಉದುರುರೋಮಗಳಸಹಿತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.2 – 1 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು, ಉದುರುರೋಮಗಳ ಸಹಿತವಾಗಿರುತ್ತವೆ; ಪತ್ರಗಳು 5 – 10.5 X 1.5–7 ಸೆಂ.ಮೀ. ಗಾತ್ರ,ಅಂಡವೃತ್ತ - ಚತುರಸ್ರದ ಆಕಾರ, ಚೂಪಲ್ಲದ ಅಥವಾ ಚೂಪಾದ ಮಾದರಿಯಿಂದ ಅಗಲವಾದ ಹಾಗೂ ದುಂಡನೆಯ ತುದಿ ಮತ್ತು ತಗ್ಗುಳ್ಳ ಅಗ್ರ ಹೊಂದಿದ ಕಿರಿದಾದ ಕ್ರಮೇಣ ಚೂಪಾಗುವ ತುದಿ,ಬೆಣೆಯಾಕಾರದ ಬುಡ ,ಗರಗಸ ದಂತಿತವಾದ ಅಂಚು ಹೊಂದಿದ್ದು ಎಳೆಯದಾಗಿದ್ದಾಗ ಪತ್ರದ ತಳಭಾಗದ ಮಧ್ಯನಾಳದ ಮೇಲಾದರೂ ಮೃದುತುಪ್ಪಳದಿಂದ ಕೂಡಿರುತ್ತವೆ,ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು,ಕಡುಹಸಿರು ಬಣ್ಣ ಮತ್ತು ಹೊಳಪನ್ನುಳ್ಳ ಮೇಲ್ಭಾಗ,ಮಾಸಲು ಬಣ್ಣದ ತಳಭಾಗವನ್ನು ಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿನ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8 – 14 ಜೋಡಿಗಳಿದ್ದು,ಮೇಲೆದ್ದಿರುವುದಿಲ್ಲ ಹಾಗೂ ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ ಅಥವಾ ಕಾಣುವಂತಿದ್ದರೆ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ದೊಡ್ಡ ಗಾತ್ರದವುಗಳಾಗಿದ್ದು,ಒಂಟಿಯಾಗಿದ್ದು ಬಿಳಿ ಬಣ್ಣದಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಅಥವಾ ಅಕ್ಷಾಕಂಕುಳಿನಲ್ಲಿರುತ್ತವೆ;ಹೂತೊಟ್ಟುಗಳು ಅಂದಾಜು 0.2 – 0.5 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಕೋಶಗಳ ಬೆನ್ನು ಭಾಗದ ಮೂಲಕ ಬಿರಿಯುವ ಮಾದರಿಯ -ವುಗಳಾಗಿದ್ದು, ಚತುರಸ್ರಾಕಾರದಲ್ಲಿದ್ದು ,3 ಸೆಂ.ಮೀ. ವರೆಗಿನ ಉದ್ದವಿದ್ದು, 5 – ಕೋಶಗಳನ್ನೊಳಗೊಂಡಿರುತ್ತವೆ; ಬೀಜಗಳ ಸಂಖ್ಯೆ ಹಲವಾರು ಇದ್ದು ಒಂದು ತುದಿಯಲ್ಲಿ ಬಿಳಿ ರೆಕ್ಕೆಯನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

800 ಮತ್ತು 1900 ಮೀ. ನಡುವಿನ ಮಧ್ಯಮ ಮತ್ತು ಅತಿಎತ್ತರದ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ(ನೀಲಗಿರಿ,ವಯನಾಡು ಮತ್ತು ಕೊಡಗು ಪ್ರದೇಶಗಳು)ಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Wight & Arn., Prodr. 87. 1834; Gamble, Fl. Madras 1: 79. 1997 (re. ed); Sasidharan, Biodiversity documentation for Kerala- Flowering Plants, part 6: 43. 2004

Top of the Page