ಗೋನಿಯೋತಲಾಮಸ್ ರಿಂಕಾಂತೆರಸ್ Dunn - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10ಮೀ ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಪ್ಪುಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿ ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ. ತೊಟ್ಟುಗಳು 0.6 ರಿಂದ 1.3ಸೆಂ.ಮೀ. ಉದ್ದ ಹೊಂದಿದ್ದು, ಧೃಡವಾಗಿದ್ದು ಕಾಲುವೆಗೆರೆಯನ್ನು ಹೊಂದಿರುತ್ತವೆ. ಎಲೆ ಪತ್ರ 8 - 16.5 × 3.8 - 6 ಸೆಂ.ಮೀ. ಗಾತ್ರವಿರುತ್ತವೆ, ಆಕಾರ ಸಾಮಾನ್ಯವಾಗಿ ಅಂಡವೃತ್ತ ಧೀರ್ಘ ಚತುರಾಸ್ರಾಕಾರದಲ್ಲಿದ್ದು ಕೆಲವು ವೇಳೆ ಇಕ್ಕಟ್ಟಾದ ಧೀರ್ಘ ಚತುರಾಸ್ರಾಕಾರ ಹೊಂದಿರುತ್ತವೆ; ಕ್ರಮೇಣ ಚೂಪಾಗುವ (ತೀಕ್ಷ್ಣಾಗ್ರ ಭಾಗ 0.5 ರಿಂದ 0.8 ಸೆಂ.ಮೀ. ಉದ್ದವಾಗಿರುತ್ತದೆ) ಮಾದರಿಯಲ್ಲಿದ್ದು ಚೂಪಾದ ಬುಡವಿರುತ್ತದೆ, ಪತ್ರಗಳು ರೋಮರಹಿತವಾಗಿದ್ದು, ನಯವಾದ ಅಂಚನ್ನು ಹೊಂದಿರುತ್ತದೆ. ಎರಡನೇ ದರ್ಜೆಯ ನಾಳಗಳು 8 ರಿಂದ 12 ಜೋಡಿಗಳಿದ್ದು ನಾಜೂಕಾಗಿ ತೆಳುವಾಗಿದ್ದು ಕೆಲವು ವೇಳೆ ಅಂಚಿನ ಬಳಿ ಅಗೋಚರವಾಗುತ್ತವೆ; ತೃತೀಯ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಹಸಿರು ಮಿಶ್ರಿತ ಶ್ವೇತ ಬಣ್ಣದವಾಗಿದ್ದು, ಅಕ್ಷಾಕಂಕುಳಿನಲ್ಲಿ ಪುಷ್ಪಮಂಜರಿವೃತ್ತದ ಮೇಲೆ ಏಕಾಂಗಿಯಾಗಿರುತ್ತವೆ. ಹಾಗೂ ಕೊಂಚ ಪ್ರಮಾಣದ ಮೃದು ತುಪ್ಪಳ ಸಹಿತವಾಗಿರುತ್ತವೆ.
ಕಾಯಿ /ಬೀಜ : ಒಂದು ಬೀಜವುಳ್ಳ ಬೆರ್ರಿ ಮಾದರಿಯ ಕಾಯಿಗಳು ಗುಂಪಾಗಿರುತ್ತವೆ. ಬೆರ್ರಿಗಳು ಚತುರಸ್ರಾಕಾರದಿಂದ ಬುಗುರಿ ಆಕಾರದಲ್ಲಿದ್ದು ತೊಟ್ಟು ಸಹಿತವಾಗಿದ್ದು ರೋಮರಹಿತವಾಗಿರುತ್ತವೆ,

ಜೀವಪರಿಸ್ಥಿತಿ :

ಈ ಪ್ರಭೇದವು ಸಮುದ್ರ ಮಟ್ಟಕ್ಕಿಂತ 600 ರಿಂದ 1200ಮೀ ಎತ್ತರದವರೆಗಿನ ಮಧ್ಯಮ ಎತ್ತರದಲ್ಲಿರುವ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ (ನಾಲ್ಕನೇ ಸಮಗ್ರ ಸಮೂಹ)ದಲ್ಲಿ ಬೆಳೆಯುತ್ತವೆ.

ವ್ಯಾಪನೆ :

ದಕ್ಷಿಣ ಸಹ್ಯಾದ್ರಿ ಪ್ರದೇಶದ ಅಗಸ್ತ್ಯಮಲೈ ಬೆಟ್ಟ ಶ್ರೇಣಿಗಳಲ್ಲಿ ಬೆಳೆಯುವ ಈ ಸಸ್ಯ ಪಶ್ಚಿಮ ಘಟ್ಟಗಳಿಗೆ ಸೀಮಿತ.

ಸ್ಥಿತಿ :

ನಶಿಸುವ ಆತಂಕಕಾರಿಸ್ಥಿತಿ (IUCN, 2000)

ಗ್ರಂಥ ಸೂಚಿ :

Bull. Misc. Inf. Kew 1914: 182. 1914; Gamble, Fl. Madras 1: 19. 1997 (re. ed); Mohanan and Sivadasan, Fl. Agasthymala 54. 2002; Sasidharan, Biodiversity documentation for Kerala- Flowering Plants, part 6: 17. 2004.

Top of the Page