ಗಾಂಫಾಂಡ್ರ ಕೋರಿಯಾಸಿಯ Wt. - ಐಕಾಸಿನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ಮಾದರಿಯಲ್ಲಿರುತ್ತವೆ ಮತ್ತು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.6 -1.4 ಸೆಂ.ಮೀ. ವರೆಗಿನ ಉದ್ದವಿದ್ದು ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತವೆ;ಪತ್ರಗಳು 5-11X2-4ಸೆಂ.ಮೀ.ಗಾತ್ರ ಹೊಂದಿದ್ದು ಅಂಡವೃತ್ತ-ಬುಗುರಿ ಆಕಾರದಲ್ಲಿದ್ದು (ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ), ಮೊಂಡಾದ ಕ್ರಮೇಣ ಚೂಪಾಗುವ ಮಾದರಿಯಿಂದ ಚೂಪಾಗಿರದ ರೀತಿಯವರೆಗಿನ ತುದಿ, ಚೂಪಾದ ಅಥವಾ ಬೆಣೆಯಾಕಾರದ ಬುಡ ಮತ್ತು ನಯವಾದ ಅಥವಾ ಕೆಲವು ವೇಳೆ ತುಸುವಾಗಿ ಹಿಂಸುರುಳಿಯಾದ ಅಂಚನ್ನು ಹೊಂದಿರುತ್ತವೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲಿದ್ದು ರೋಮರಹಿತವಾಗಿರುತ್ತದೆ;ಪತ್ರದ ಮೇಲ್ಮೈ ಒಣಗಿದಾಗ ಮಂದವಾದ ಹಸಿರು ಬಣ್ಣದಲ್ಲಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 4;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿನ ಅಥವಾ ಎಲೆಗಳ ಎದುರಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಹಾಗೂ ಬಿಳಿ ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು 1- 1.5 ಸೆಂ.ಮೀ. ಉದ್ದವಿರುತ್ತವೆ ಮತ್ತು ವರ್ತುಲ ಸ್ಥಂಭಾಕೃತಿಯ ಅಂಡವೃತ್ತ ಆಕಾರದಲ್ಲಿರುತ್ತವೆ; ಬೀಜ 1.

ಜೀವಪರಿಸ್ಥಿತಿ :

ಅತಿ ಎತ್ತರದ ಪ್ರದೇಶಗಳ(1400-2200 ಮೀ.) ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಸಾಮಾನ್ಯವಾಗಿ ಮತ್ತು ಮಧ್ಯಮ ಎತ್ತರದ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಆಗಾಗ್ಗೆ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Wt., Ic.Ill.1. 103.1840;Gamble, Fl. Madras 1:195.1997 (Rep. Ed.);Sasidharan, Biodiversity documentation for Kerala- Flowering Plants, part 6 ,93. 2004;Saldanha, Fl. Karnataka 2:104. 1996.

Top of the Page