ನಿಡಿಯ ಗ್ಲಾಕ (Fresen.) Gilg - ತೈಮೆಲೀಯೇಸಿ

ಪರ್ಯಾಯ ನಾಮ : ಲ್ಯಾಸಿಯೋಸೈಫಾನ್ ಗ್ಲಾಕಸ್ Fresen.; ಲ್ಯಾಸಿಯೋಸೈಫಾನ್ ಎರಿಯೋಸೆಫಾಲಸ್ Decne

Vernacular names : Tamil: ನಂಜು,ನಂಗು,ನಂಜಿನಾರ್,ನಂಚುMalayalam: ಮುಕ್ಕುಡೆ,ಮುಕುಡಕ,ಮುಕುಟೆ,ಮೂಕುತಿ,ರಾಮಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು,ಬಲಿತಾಗ ಅನಿಯತವಾಗಿ ಚಕ್ಕೆಯೆದ್ದಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಛಾಯೆಯಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತದಿಂದ ದುಂಡಾಗಿರುವ ಮಾದರಿಯವರೆಗಿರುತ್ತವೆ, ಎಳೆಯ -ದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ತೊಟ್ಟುಗಳು 0.3 ಸೆಂ.ಮೀ. ಉದ್ದವಿದ್ದು, ತೆಳುವಾಗಿರುತ್ತವೆ ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ಮತ್ತು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ ;ಪತ್ರಗಳು 4 – 8.5 X-1-2 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ - ಬುಗುರಿವರೆಗಿನ ಆಕಾರ ,ಅಗ್ರದಲ್ಲಿ ಮೊನಚು ಮುಳ್ಳನ್ನು ಹೊಂದಿರುವ ಚೂಪಾದ ತುದಿ,ಚೂಪಲ್ಲದ ಅಥವಾ ಒಳಬಾಗಿದ ಬುಡ, ನಯವಾದ ಅಂಚು ಹೊಂದಿದ್ದು ತಳಭಾಗ ಮೃದುತುಪ್ಪಳದಿಂದ ಕೂಡಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆ ಯಾಗಿರುತ್ತದೆ ಅಥವಾ ಸ್ವಲ್ಪಮಟ್ಟಿನ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು10 ಜೋಡಿಗಳವರೆಗಿದ್ದು ಪ್ರಮುಖವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳುವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಹಳದಿ ಬಣ್ಣದಲ್ಲಿದ್ದು, ತುದಿಯಲ್ಲಿನ ಚೆಂಡು ಮಂಜರಿಯಲ್ಲಿದ್ದು ರೇಷ್ಮೆಯಂತಹ ಸಹಪತ್ರಕಗಳ ಚಕ್ರದ ವಲಯದ ಸಮೇತವಿರುತ್ತವೆ;ತೊಟ್ಟು 0.2 ಸೆಂ.ಮೀ. ಉದ್ದವಿರುತ್ತದೆ.
ಕಾಯಿ / ಬೀಜ : ಫಲಗಳು ಬಿರಿಯದ,ಒಣ ಮಾದರಿಯವುಗಳಾಗಿದ್ದು ಸಣ್ಣ ಗಾತ್ರದಲ್ಲಿರುತ್ತವೆ, ಒಂದು ಬೀಜವನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

500 ಮತ್ತು 2000 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಭಾರತ,ಶ್ರೀಲಂಕಾ ಮತ್ತು ಆಫ್ರಿಕ;ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Engler, Bot. Jahrb. Syst. 19. 265. 1894; Gamble, Fl. Madras 2:1244. 1993 (re.ed.); Sasidharan, Biodiversity documentation for Kerala- Flowering Plants, part 6: 402. 2004

Top of the Page