ಗರುಗ ಫ್ಲಾರಿಬಂಡ Decne. var. ಗ್ಸಾಂಬ್ಲಿಯೈ (King ex Smith) Kalk - ಬರ್ಸರೇಸಿ

Synonym : ಗರುಗ ಗ್ಯಾಂಬ್ಲಿಯೈ King ex Smith

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಚಕ್ಕೆಯೆದ್ದ ಮಾದರಿಯಲ್ಲಿದ್ದು ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಅಸಮ ಸಂಖ್ಯಾ ಗರಿರೂಪಿ ಸಂಯುಕ್ತ ಮಾದರಿಯವುಗಳಾಗಿದ್ದು 25 ಸೆ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು 5 ಸೆ.ಮೀ. ಉದ್ದದ ಅಕ್ಷದಿಂಡನ್ನು ಹೊಂದಿರುತ್ತದೆ; ಅಭಿಮುಖಿಗಳಾದ 10 ಜೋಡಿ ಕಿರು ಎಲೆಗಳು ಹಾಗೂ ಒಂದು ತುದಿಯಲ್ಲಿರುವ ಕಿರು ಎಲೆಗಳು ಇರುತ್ತವೆ; ಪಾರ್ಶ್ವದಲ್ಲಿರುವ ಕಿರು ಎಲೆಗಳು 4 ಮಿ.ಮೀ.ವರೆಗಿನ ಉದ್ದ ಹಾಗು ತುದಿಯಲ್ಲಿನ ಕಿರು ಎಲೆ 2 ಸೆ.ಮೀ.ವರೆಗಿನ ಉದ್ದ ಹೊಂದಿರುತ್ತದೆ; ಪತ್ರ 11 - 15 x 4.5 - 5 ಸೆ.ಮೀ. ಗ್ರಾತ್ರ, ಚತುರಸ್ರಾಕಾರ-ಭರ್ಜಿಯ ಆಕಾರ, ಕಾಗದವನ್ನೋಲುವ ಹಾಗೂ ರೋಮರಹಿತವಾದ ಮೇಲ್ಮೈ ಮತ್ತು ಮಾಸಲು ಬೂದು ಬಣ್ಣ ಹೊಂದಿರುತ್ತದೆ, ಪತ್ರದ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡಭಾಗ ಓರೆಯಾಗಿದ್ದು ಬೆಣೆಯಾಕಾರದಲ್ಲಿರುತ್ತದೆ, ಅಂಚು ಗರಗಸ ದಂತಿತ; ಎರಡನೇ ದರ್ಜೆಯ ನಾಳಗಳು ಸುಮಾರು 15 ಜೋಡಿಗಳಿದ್ದು, ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು 25 ಸೆ.ಮೀ.ವರೆಗಿನ ಉದ್ದ ಹೊಂದಿದ್ದು, ಅಕ್ಷಾಕಂಕುಳಿನಲ್ಲಿರುವ ಕವಲೊಡೆಯುವ ಮಧ್ಯಾಭಿಸರ ಮಾದರಿಯವು; ಪುಷ್ಪಮಂಜರಿಯ ವೃಂತ 5 ಸೆ.ಮೀ.ವರೆಗಿನ ಉದ್ದ ಹೊಂದಿರುತ್ತದೆ.
ಕಾಯಿ /ಬೀಜ : ಕಾಯಿಗಳು ಗೋಳಾಕಾರದಿಂದ ಹಾಲೆಗಳುಳ್ಳ ಡ್ರೂಪ್ ಮಾದರಿಯವಾಗಿದ್ದು, 1.5 ಸೆ.ಮೀ.ವರೆಗಿನ ವ್ಯಾಸದಲ್ಲಿರುತ್ತವೆ; ಪ್ರತಿ ಪೈರೀನಿನಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

700 ರಿಂದ 1600 ಮೀ.ವರೆಗಿನ ಮಧ್ಯಮ ಹಾಗೂ ಅತಿ ಎತ್ತರ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಅಲ್ಲಿಂದಲ್ಲಿ ಕಂಡು ಬರುತ್ತದೆ.

ವ್ಯಾಪನೆ :

ಭಾರತದಿಂದ ಪಶ್ಚಿಮ ಚೀನಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ, ಮತ್ತು ತಮಿಳುನಾಡಿನ ನೀಲಗಿರಿ ಘಟ್ಟಗಳು.

ಗ್ರಂಥ ಸೂಚಿ :

Blumea 7:466. 1953; Gamble, Fl. Madras 1:169. 1997 (re.ed); Sasidharan, Biodiversity documentation for Kerala - Flowering Plants, part 6:86. 2004.

Top of the Page