ಗಾರ್ಸೀನಿಯ ಮೊರೆಲ್ಲ (Gaertn.) Desr. - ಕ್ಲೂಸಿಯೇಸಿ

Synonym : ಮ್ಯಾಂಗೋಸ್ಟಾನ ಮೊರೆಲ್ಲ Gaertn.; ಗಾರ್ಸೀನಿಯ ಎಲಿಪ್ಟಿಕ Wall.; ಗಾರ್ಸೀನಿಯ ಗಟ್ಟ Wt.

ಕನ್ನಡದ ಪ್ರಾದೇಶಿಕ ಹೆಸರು : ಅರದಾಳ, ದೇವನಹುಳಿ,ಜಾರಿಗೆಹುಳಿ, ಅರಿಸಿನ ಗುರಿಗೆ,ಮುರಿನಹುಳಿ, ಪೊನ್ಪುಳಿ.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಕಡು ಕಂದು ಬಣ್ಣ ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಶ್ವೇತ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೋನಯುಕ್ತವಾಗಿದ್ದು ರೋಮರಹಿತ- ವಾಗಿರುತ್ತವೆ.
ಜಿನುಗು ದ್ರವ : ಸಸ್ಯಕ್ಷೀರ ಹೇರಳವಾಗಿದ್ದು, ಹಳದಿ ಬಣ್ಣ ಹೊಂದಿರುತ್ತದೆ .
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಎಲೆತೊಟ್ಟುಗಳು 0.6 ರಿಂದ 1.5 ಸೆಂ.ಮೀ ಉದ್ದವಾಗಿದ್ದು ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ಬುಡಭಾಗದಲ್ಲಿ ಒರೆಯನ್ನುಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಎಲೆಪತ್ರಗಳು 6.5 -15 X 3.5 - 8 ಸೆಂ.ಮೀ ಗಾತ್ರ ಹೊಂದಿದ್ದು ಸಾಮಾನ್ಯವಾಗಿ ಅಂಡವೃತ್ತಾಕೃತಿಯಲ್ಲಿ ಅಥವಾ ಕೆಲವು ವೇಳೆ ಸಂಕುಚಿತಗೊಂಡ ಬುಗುರಿಯಾಕಾರ ಹೊಂದಿದ್ದು, ಚೂಪಾದುದರಿಂದ ಹಿಡಿದು ಕೃಮೇಣ ಚೂಪಾಗುವ ಮಾದರಿಯ ತುದಿ ಹಾಗೂ ಒಳಬಾಗಿದ ತಳವುಳ್ಳ ಮಾದರಿಯಬುಡವನ್ನು ಹೊಂದಿರುತ್ತವೆ, ಎಲೆಗಳು ತೊಗಲು ಅಥವಾ ಉಪ ತೊಗಲನ್ನೋಲುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ- ವಾಗಿರುತ್ತವೆ..
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ ಗುಚ್ಛಗಳಲ್ಲಿರುತ್ತವೆ.; ಹೆಣ್ಣು ಹೂಗಳು ಗಂಡುಹೂಗಳಿಗಿಂತ ದೊಡ್ಡಗಾತ್ರದಲ್ಲಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿ ಗಳು 3ಸೆಂ.ಮೀ ಅಗಲವಿದ್ದು ನಾಲ್ಕು ಬೀಜಗಳನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1200 ಮೀ ಎತ್ತರದವರೆಗಿನ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಸಾಮಾನ್ಯವಾಗಿ ಕಂಡುಬರುತ್ತದೆ..

ವ್ಯಾಪನೆ :

ಇಂಡೂಮಲೇಶಿಯ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳ ಉದ್ದಗಲಕ್ಕೂ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Lamarck, Encycl. 3:701.405.1792.; Gamble,Fl. Madras1: 73. 1997 (re.ed.); Sasidharan, Biodiversity documentation for Kerala-Flowering Plants, part 6:41.2004;Cooke, Fl.Bombay 1: 77. 1902

Top of the Page