ಫ್ಲಕೋರ್ಶಿಯ ಮೊಂಟಾನ Graham - ಫ್ಲಕೋರ್ಶಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕವಲೊಡೆದ ಮತ್ತು ಸರಳವಾದ ದೊಡ್ಡ ಮುಳ್ಳಗಳನ್ನು ಹೊಂದಿರುತ್ತದೆ.ತೊಗಟೆ ಕಡು ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ..
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ನಸುಗೆಂಪಿನಿಂದ ಕೂಡಿದ ಹಳದಿಬಣ್ಣ ಒರಟು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಸಾಲಿನಲ್ಲಿರುತ್ತವೆ. ತೊಟ್ಟುಗಳು 0.4-0.9ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ.ಪತ್ರಗಳು ಸಂಕುಚಿತ-ಚತುರಸ್ರದ ಆಕಾರ,ಕ್ರಮೇಣ ಚೂಪಾಗುವ ತುದಿ,ಚೂಪಾದ ಬುಡ,ದುಂಡೇಣಿನ ದಂತವುಳ್ಳ ಅಂಚು ಹೊಂದಿದ್ದು, ಪತ್ರದ ತಳಭಾಗದ ಮಧ್ಯನಾಳದ ಮೇಲೆ ಮೃದು ತುಪ್ಪಳವನ್ನು ಹೊಂದಿರುತ್ತವೆ, ಕೆಲವು ವೇಳೆ ಮಿಕ್ಕ ನಾಳಗಳ ಮೇಲೂ ಮೃದುತುಪ್ಪಳಿರುತ್ತದೆ; ಪತ್ರಗಳು ಒಣಗಿದಾಗ ಕಂದು ಬಣ್ಣದಲ್ಲಿರುತ್ತದೆ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ;ಮಧ್ಯ ನಾಳ ಚಪ್ಪಟೆಯಾಗಿರುತ್ತದೆ ಅಥವಾ ಪತ್ರದ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ;ಪತ್ರದ ಬುಡ ಭಾಗದಲ್ಲಿ 3-5 ನಾಳಗಳಿರುತ್ತವೆ;ಎರಡನೇ ದರ್ಜೆಯ ನಾಳಗಳು 4-9 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿ ಇರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು ಮಾಗಿದಾಗ ಮಾಂಸಲವಾಗಿರುತ್ತದೆ ಮತ್ತು ಕೆಂಪಾಗಿರುತ್ತವೆ

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ನಿತ್ಯಹರಿದ್ವರ್ಣದಿಂದ ಅರೆನಿತ್ಯಹರಿದ್ವರ್ಣ ಕಾಡುಗಳಲ್ಲಿನ ಒಳಛಾವಣಿಯಲ್ಲಿ ಬೆಳೆಯುವ ಪ್ರಭೇದ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಸಾಮಾನ್ಯವಾಗಿ ದಕ್ಷಿಣ ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Cat. Pl. Bombay 10. 1839; Gamble, Fl. Madras 1 54.1997 (re.ed); Sasidharan, Biodiversity documentation for Kerala- Flowering Plants, part 6, 32. 2004; Saldanha, Fl. Karnataka 1 270. 1996.

Top of the Page