English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 5 ಮೀ ಎತ್ತರದವರೆಗೆ ಬೆಳೆಯುವ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಸ್ಪಷ್ಟವಾದ ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವಂತಹ ಮಾದರಿಯವು;ಎಲೆತೊಟ್ಟುಗಳ ಉದ್ದ0.4 ರಿಂದ 0.7 ಸೆಂ.ಮೀ ಇದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 5- 10X 1.3 - 4 ಸೆಂ.ಮೀ ಗಾತ್ರವಿದ್ದು,ಅಂಡವೃತ್ತಾಕೃತಿ ಅಥವಾ ಭರ್ಜಿಯಾಕಾರಲ್ಲಿದ್ದು ಸಂಕುಚಿತವಾಗಿ ಚೂಪಾದ ಅಥವಾ ಕ್ರಮೇಣ ಚೂಪಾಗುವ ಮಾದರಿಯ ತುದಿ ಹಾಗೂ ಚೂಪಾದ ಬುಡವನ್ನು ಹೊಂದಿರುತ್ತವೆ, ಪತ್ರದ ಅಂಚು ಮಂದವಾಗಿದ್ದುಕೊಂಚ ಒಳತಿರುವು ಹೊಂದಿರುತ್ತದೆ;ಪತ್ರಗಳು ರೋಮರಹಿತವಾಗಿರುತ್ತವೆ;ಎರಡನೇ ದರ್ಜೆಯ ನಾಳಗಳು ಪತ್ರದ ತಳಭಾಗದಲ್ಲಿ ಅಸ್ಪಷ್ಟವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ. |
| ಪುಷ್ಪಮಂಜರಿ/ಹೂಗಳು : | ಹೂಗಳು ಮಂದವಾದ ಕೆನ್ನೀಲಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿರುವ ಮಧ್ಯಾರಂಭಿ ಮಾದರಿಯ ಪುಷ್ಪಮಂಜರಿಯಲ್ಲಿರುತ್ತವೆ; ಹೂಗಳು ಮಬ್ಬಾದ ಕೆನ್ನೀಲಿ ಬಣ್ಣದವು. |
| ಕಾಯಿ /ಬೀಜ : | ಸಂಪುಟ ಫಲಗಳು ಬುಗುರಿಯಾಕಾರ ಹೊಂದಿದ್ದು ಐದು ರೆಕ್ಕೆಗಳ ಸಮೇತವಿದ್ದು ಒಂದರಿಂದ ಎರಡು ಬೀಜಗಳನ್ನು ಹೊಂದಿರುತ್ತವೆ.. |