ಯೂಜೀನಿಯ ಮ್ಯಾಕ್ರೋಸೆಪಾಲ Duthie - ಮಿರ್ಟೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗಿನ ಸಣ್ಣ ದೊಡ್ಡ ಗಾತ್ರದ ಪೊದೆಗಳು ಅಥವಾ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಛಾಯೆ ಹೊಂದಿರುತ್ತದೆ ಮತ್ತು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಮೃದುತುಪ್ಪಳದಿಂದ ಆವೃತಗೊಂಡಿರುತ್ತವೆ;ಎಳೆಯ ಕಿರುಕೊಂಬೆಗಳು ಕೆಂಪು ಛಾಯೆಯನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.5 – 0.8 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತು ಎಳೆಯದಾಗಿದ್ದಾಗ ವಾದ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 7 – 14.5 X2.7 – 5.5 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ ಅಥವಾ ಅಂಡವೃತ್ತ-ಅಂಡದ ಆಕಾರ ಹೊಂದಿದ್ದು,ಮೊಂಡಾಗ್ರವುಳ್ಳ ಕ್ರಮೇಣ ಚೂಪಾದ ತುದಿ,ಚೂಪಾದ ಬುಡ,ನಯವಾದ ಅಂಚು, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೊಮರಹಿತವಾಗಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು ಸುಮಾರು 10-15 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ ಹಾಗೂ ಅಂಚಿನ ಬಳಿ ಕುಣಿಕೆಯಾಗಿ ಸೇರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಹೂಗಳು ದೊಡ್ಡ ಬಿಳಿ ಬಣ್ಣದವುಗಳಾಗಿದ್ದು ತೊಟ್ಟು ರಹಿತವಾಗಿರುತ್ತವೆ ಮತ್ತು ಅಕ್ಷಾಕಂಕುಳಿನಲ್ಲಿ ಅಥವಾ ಎಲೆರಹಿತ ಅಕ್ಷಗಳ ಪಾರ್ಶ್ವದಲ್ಲಿ ಒಂಟಿಯಾಗಿ ಅಥವಾ ಜೋಡಿಯಾಗಿರುತ್ತವೆ..
ಕಾಯಿ / ಬೀಜ : ಬೆರ್ರಿ ಫಲಗಳು ಮುಕುಟದಲ್ಲಿ ಪುಷ್ಪಪಾತ್ರೆಯ ಎಸಳುಗಳನ್ನು ಹೊಂದಿರುತ್ತವೆ ;ಬೀಜ ಒಂದು.

ಜೀವಪರಿಸ್ಥಿತಿ :

800 ಮೀ.ವರೆಗಿನ ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Hooker, Fl. Brit. India 2: 501.1879;Cooke, Fl. Bombay 1:493(524). 1903.

Top of the Page