ಎಪಿಪ್ರೈನಸ್ ಮಲ್ಲೋಟಿಫಾರ್ಮಿಸ್ (Mueller) Crozia - ಯೂಫೊರ್ಬಿಯೇಸಿ

Synonym : ಸಿಂಫೀಲ್ಲಿಯ ಮಲ್ಲೋಟಿಫಾರ್ಮಿಸ್ Muell.-Arg.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪ-ದುಂಡಾಗಿದ್ದು ಎಳೆಯದಾಗಿದ್ದಾಗ ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಅಂಡ-ಭರ್ಜಿಯ ಆಕಾರ ಹೊಂದಿರುತ್ತವೆ ಮತ್ತು ನಕ್ಷತ್ರ- ಮೃದುತುಪ್ಪಳದಿಂದ ಕೂಡಿರುತ್ತದೆ ಹಾಗೂ ಉದುರಿ ಹೋಗುವ ರೀತಿಯವುಗಳಾಗಿರುತ್ತವೆ. ತೊಟ್ಟುಗಳು ಅಂದಾಜು 0.7 – 5 ಸೆಂ.ಮೀ.ಉದ್ದವಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಹಾಗೂ ತುದಿ ಮತ್ತು ಬುಡದಲ್ಲಿ ಊದಿಕೊಂಡಿರುತ್ತವೆ;ಪತ್ರಗಳು 6.5 -17.5 X 3.3 – 8.5 ಸೆಂ. ಮೀ. ಗಾತ್ರ, ಸಾಮಾನ್ಯವಾಗಿ ಅಂಡವೃತ್ತದ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಮತ್ತು ಬುಡ ಚೂಪಾಗಿರುತ್ತವೆ;ಅಂಚು ನಯವಾಗಿರುತ್ತದೆ;ಮೇಲ್ಮೈ ಉಪ-ತೊಗಲನ್ನೋಲುವ ಮಾದರಿಯಲ್ಲಿದ್ದು ಎಳೆಯದಾಗಿದ್ದಾಗ ನಕ್ಷತ್ರ- ಮೃದುತುಪ್ಪಳದಿಂದ ಕೂಡಿರುತ್ತದೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿಗೆ ಉಬ್ಬಿಕೊಂಡಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 7 ಜೋಡಿಗಳಿದ್ದು ತಳಭಾಗದಲ್ಲಿ ಪ್ರಮುಖವಾಗಿ ಮೇಲೆದ್ದಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ;ಗಂಡು ಮತ್ತು ಹೆಣ್ಣು ಹೂಗಳು ಒಂದೇ ಸಸ್ಯದಲ್ಲಿರುತ್ತವೆ;ಪುಷ್ಪಮಂಜರಿಗಳು ತುದಿಯಲ್ಲಿರುವ ಮಧ್ಯಾಭಿಸರ ಮಾದರಿಯವು;ಗಂಡು ಹೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಗುಚ್ಛಗಳಲ್ಲಿರುತ್ತವೆ ಮತ್ತು ಹೆಣ್ಣು ಹೂಗಳು ಕೆಲವು ಇದ್ದು ಪುಷ್ಪಮಂಜರಿಯ ಬುಡದಲ್ಲಿ ಇರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಉಪಗೋಳಾಕಾರದಲ್ಲಿದ್ದು ಒರಟಾದ ಮೇಲ್ಮೈ ಹೊಂದಿದ್ದು 3 ಗೋಳಾಕಾರದ ಬೀಜಗಳನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಫ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

J. Arn. Arb. 23:53.1942; Gamble, Fl.Madras 2:1323.1993 Sasidharan, Biodiversity documentation for Kerala – Flowering plants, part 6, 416.2004;Saldanha, Fl. Karnataka 2:132.1996.

Top of the Page