ಡ್ರೈಪೆಟೆಸ್ ಒಬ್ಲಾಂಜಿಫೋಲಿಯ (Bedd.) Airy Shaw - ಯೂಫೊರ್ಬಿಯೇಸಿ

Synonym : ಲಾನಿಯಾಸಗಮ್ ಒಬ್ಲಾಂಜಿಫೋಲಿಯಮ್ Bedd.; ಸೈಕ್ಲೋಸ್ಟೆಮಾನ್ ಮ್ಯಾಕ್ರೋಫಿಲ್ಲಸ್ Bl.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಕೊರಕಲುಗಳನ್ನೊಳಗೊಂಡಿರುತ್ತದೆ;ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ ಹಾಗೂ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು ದುಂಡಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಅಂಡಾಕಾರದಲ್ಲಿದ್ದು 0.7 ಸೆಂ.ಮೀ. ವರೆಗಿನ ಉದ್ದ ಹೊಂದಿರುತ್ತವೆ ಹಾಗೂ ಉದುರಿ ಹೋಗುತ್ತವೆ; ತೊಟ್ಟುಗಳು 0.4-1 ಸೆಂ.ಮೀ. ಉದ್ದವಿದ್ದು,ದೃಢವಾಗಿರುತ್ತವೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ ಹಾಗೂ ಎಳೆಯದಾಗಿದ್ದಾಗ ಮೃದು ತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು12-30 X 5 – 11 ಸೆಂ. ಮೀ. ಗಾತ್ರ, ಚತುರಸ್ರದಿಂದ ಅಂಡವೃತ್ತ-ಚತುರಸ್ರದವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಕಿರಿದಾದ ಮತ್ತು ಥಟ್ಟನೆ, ಕ್ರಮೇಣವಾಗಿ ಚೂಪಾಗುವ ಮಾದರಿಯಲ್ಲಿದ್ದು ಬುಡ ದುಂಡಾಗಿರುತ್ತದೆ; ಅಂಚು ನಯವಾಗಿರುತ್ತದೆ ಅಥವಾ ಹೆಚ್ಚಿನ ಅಂತವರವುಳ್ಳ ಗರಗಸ ದಂತಗಳನ್ನುಳ್ಳ ಮಾದರಿಯಲ್ಲಿರುತ್ತದೆ ;ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6-10 ಜೋಡಿಗಳಿದ್ದು ದೃಢವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ದೃಢವಾಗಿದ್ದು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ಮತ್ತು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವ ಭಾಗದಲ್ಲಿದ್ದು ಹಳೆ ಕವಲುಗಳ ಮೇಲೆ ಗುಚ್ಛಗಳಲ್ಲಿರುತ್ತವೆ ಮತ್ತು ತೊಟ್ಟು ರಹಿತವಾಗಿರುತ್ತವೆ.
ಕಾಯಿ /ಬೀಜ : ಡ್ರೂಪ್ ಫಲಗಳು ಉಪ-ಗೋಳಾಕಾರದಲ್ಲಿದ್ದು 2.5 ಸೆಂ.ಮೀ. ಅಡ್ಡಗಲದ ಅಳತೆ ಹೊಂದಿರುತ್ತವೆ ಮತ್ತು ಕೆಂಗಂದು ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ ಹಾಗೂ ತೊಟ್ಟುರಹಿತವಾಗಿದ್ದು 2 ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

400 ರಿಂದ 1400 ಮೀ. ನಡುವಿನ ಕಡಿಮೆ ಮತ್ತು ಮಧ್ಯಮ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಒಳಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ (ಕೊಡಗು ಮತ್ತು ಚಿಕ್ಕಮಗಳೂ ಪ್ರದೇಶಗಳು) ಕಂಡುಬರುತ್ತದೆ.

ಗ್ರಂಥ ಸೂಚಿ :

Kew Bull. 23:56.1969;Gamble, Fl.Madras 2:1302.1993 (rep.ed.) Sasidharan, Biodiversity documentation for Kerala – Flowering plants, part 6, 415.2004;Saldanha, Fl. Karnataka 2;131.1996.

Top of the Page