English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ತೆಳುವಾಗಿದ್ದು ರೋಮರಹಿತವಾಗಿರುತ್ತದೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.2 ಸೆಂ. ಮೀ.ಉದ್ದವಿದ್ದು, ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತವೆ; ಪತ್ರಗಳು 7 – 13 X 2.5 – 7 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತ- ಚತುರಸ್ರದಿಂದ ಬುಗುರಿ-ಭರ್ಜಿವರೆಗಿನ ಆಕಾರ ಹೊಂದಿದ್ದು ಕಿರಿದಾದ ಮತ್ತು ಮೊಂಡು ಅಗ್ರವುಳ್ಳ ಕ್ರಮೇಣ ಚೂಪಾಗುವ ಅಥವಾ ಚೂಪಾದ ತುದಿ ,ದುಂಡಾದ ಮತ್ತು ಸ್ವಲ್ಪ ಮಟ್ಟಿಗೆ ತಳಭಾಗಕ್ಕೆ ವಿಸ್ತರಿಸಿದ ಬುಡ, ಉಪ-ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ ಹಾಗೂರೋಮರಹಿತವಾಗಿದ್ದು ಬಹು ಸೂಕ್ಷ್ಮವಾದ ಜಾಲಬಂಧ ನಾಳ ವಿನ್ಯಾಸ ಹೊಂದಿದ ನಾಳಸಮೇತವಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 8 -13 ಜೋಡಿಗಳಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ಏಕ ಲಿಂಗಿಗಳಾಗಿರುತ್ತವೆ; ಗಂಡು ಹೂಗಳು ಸಣ್ಣ ಗಾತ್ರದ, 3 ರಿಂದ 4 ಉಪ-ತೊಟ್ಟುಸಹಿತವಿರುವ ಹೂಗಳುಳ್ಳ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಉಪ-ತೊಟ್ಟು ಹೊಂದಿದ್ದು ಒಂಟಿಯಾಗಿರುತ್ತವೆ. |
| ಕಾಯಿ /ಬೀಜ : | ಬೆರ್ರಿಗಳು ಗೋಳಾಕಾರದಲ್ಲಿದ್ದು 3 ಸೆಂ.ಮೀ.ಅಡ್ಡಗಲದಳತೆ ಹೊಂದಿದ್ದು ದಟ್ಟವಾದ ಕಂದು ಬಣ್ಣವುಳ್ಳ ಮೃದುತುಪ್ಪಳದಿಂದ ಕೂಡಿರುತ್ತವೆ; ಪುಷ್ಪಪಾತ್ರೆ ವೃದ್ಧಿಸಿದ್ದು, ತರಂಗಿತ ಅಂಚುಹೊಂದಿದ್ದು ಪ್ರಬಲವಾಗಿ ಹಿಂಚಾಚಿರುತ್ತದೆ;ಬೀಜಗಳು 1 ರಿಂದ 4. |