ಡಯೋಸ್ಪೈರಾಸ್ ಪ್ರೂರಿಯೆನ್ಸ್ Dalz. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 8 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದಟ್ಟವಾದ, 0.5 ಸೆಂ.ಮೀ.ವರೆಗಿನ ಉದ್ದ ಹೊಂದಿದ ಒರಟು ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.4 ಸೆಂ. ಮೀ.ಉದ್ದವಿದ್ದು, ದುಂಡಾಗಿರುತ್ತದೆ ಹಾಗೂ ಒರಟು ಚಪ್ಪಟೆಯಾಗಿದ್ದು ರೋಮಸಹಿತವಾಗಿರುತ್ತವೆ; ಪತ್ರಗಳು 5.5 -15 X 2 – 6.5 ಸೆಂ.ಮೀ. ಗಾತ್ರ, ಸಂಕುಚಿತ ಅಂಡವೃತ್ತ- ಚತುರಸ್ರದಿಂದ ಬುಗುರಿ-ಭರ್ಜಿವರೆಗಿನ ಆಕಾರ ಹೊಂದಿದ್ದು ಕ್ರಮೇಣ ಚೂಪಾಗುವ ತುದಿ , ದುಂಡಾದ ಅಥವಾ ಉಪ-ಹೃದಯಾಕಾರದ ಬುಡ, ಕಾಗದವನ್ನೋಲುವ ಮೇಲ್ಮೈ ಹೊಂದಿರುತ್ತವೆ.ಪತ್ರದ ಎರಡೂ ಬದಿಯ ಮಧ್ಯನಾಳ ಮತ್ತು ಅಂಚಿನ ಮೇಲೆ ದಟ್ಟವಾದ ರಟು ರೋಮವಿರುತ್ತವೆ, ಪತ್ರದ ತಳಭಾಗದಲ್ಲಿ ಒರಟು ರೋಮಗಳು ವಿರಳವಾಗಿರುತ್ತವೆ, ಪತ್ರದ ಮೇಲ್ಬಾಗ ರೋಮರಹಿತವಾಗಿರುತ್ತದೆ; ಪತ್ರದ ಮೇಲ್ಬಾಗದ ಮಧ್ಯನಾಳ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 8 -13 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕ ಲಿಂಗಿಗಳಾಗಿರುತ್ತವೆ; ಗಂಡು ಹೂಗಳುಸಣ್ಣ ಗಾತ್ರದ, ಅಕ್ಷಾಕಂಕುಳಿನಲ್ಲಿನ 1 ರಿಂದ 2 ಹೂಗಳುಳ್ಳ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 2 X 1.5 ಸೆಂ.ಮೀ. ಗಾತ್ರ ಹೊಂದಿದ್ದು, ಅಂಡಾಕಾರದಲ್ಲಿದ್ದು ಬಿರುಗೂದಲುಗಳಿಂದ ಕೂಡಿರುತ್ತವೆ ; ಪುಷ್ಪಪಾತ್ರೆ ರೇಖಾತ್ಮಕವಾಗಿರುತ್ತದೆ;ಬೀಜಗಳು 4 ಇದ್ದು ಚತುರಸ್ರಾಕಾರದಲ್ಲಿರುತ್ತವೆ;

ಜೀವಪರಿಸ್ಥಿತಿ :

1000 ಮೀ.ವರೆಗಿನ ಎತ್ತರದ ಪ್ರದೇಶಗಳ ತೇವಾಂಶವುಳ್ಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಏಲಮಲೈ,ಪಾಲಕ್ಕಾಡು ಬೆಟ್ಟಗಳು, ವಯನಾಡು ಮತ್ತು ಕೊಡಗು ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Hooker”s J.Bot.Kew Gard. Misc. 4:110.1852;;Gamble, Fl. Madras 2:774.1997(rep.ed.);Sasidharan, Biodiversity documentation for Kerala-Flowering Plants,part 6.272..2004;Singh, Monograph on Indian Diospyros L. (Persimmon, Ebony)Ebenaceae 207. 2005. Saldanha,Fl.Karnataka.1:340.1996

Top of the Page