English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 20 ಮೀ ಎತ್ತರದವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಪ್ಪು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು,ಎಳೆಯದಾಗಿದ್ದಾಗ ಅಪ್ಪು-ರೋಮಗಳಿಂದ ಕೂಡಿರುತ್ತವೆ; |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.6-1.1 ಸೆಂ.ಮೀ ಉದ್ದವಿದ್ದು, ಕಾಲುವೆ ಗೆರೆ ಸಮೇತವಿರುತ್ತವೆ, ಎಳೆಯದಾಗಿದ್ದಾಗ ರೋಮಸಹಿತವಾಗಿದ್ದು, ಬಲಿತಾಗ ರೋಮರಹಿತವಾಗಿರುತ್ತವೆ; ಪತ್ರಗಳು 6 - 18 X3.8 – 7.5 ಸೆಂ.ಮೀ. ಗಾತ್ರ, ಚತುರಸ್ರದಿಂದ ಅಂಡವೃತ್ತ-ಚತುರಸ್ರ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ಅಥವಾ ಕೆಲವು ವೇಳೆ ಚೂಪಲ್ಲದ ತುದಿ, ಚೂಪಾದುದರಿಂದ ಬೆಣೆಯಾಕಾರದ ಬುಡ, ತೊಗಲನ್ನೋಲುವ, ಮೇಲ್ಮೈ, ನಯವಾದ ಅಂಚನ್ನು ಹೊಂದಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ; ಪತ್ರಗಳು ಒಣಗಿದಾಗ ಕಂದು ಬಣ್ಣ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆಎರಡನೇ ದರ್ಜೆಯ ನಾಳಗಳು 8 – 13 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ಏಕ ಲಿಂಗಿಗಳು; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿದ್ದು ಅತಿ ಸಣ್ಣದಾದ ಗುಬುಟುಗಳ ಮೇಲಿದ್ದು, ರೇಷ್ಮೆಯಂತಹ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಹೆಣ್ಣು ಹೂಗಳು ತೊಟ್ಟುರಹಿತವಾಗಿದ್ದು ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ. |
| ಕಾಯಿ /ಬೀಜ : | ಬೆರ್ರಿಗಳು ಅಂದಾಜು 2.5 ಸೆಂ. ಮೀ. ವ್ಯಾಸ ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ಬಲಿತಾಗ ರೋಮರಹಿತವಾಗಿರುತ್ತವೆ; ದೃಢವಾಗಿ ನಿಲ್ಲುವಪುಷ್ಪಪಾತ್ರೆ ಸಮೇತವಾಗಿರುತ್ತವೆ; ಪುಷ್ಪಪಾತ್ರೆಯ ದಳಗಳು ತರಂಗಿತ ಅಂಚು ಸಮೇತವಿದ್ದು ಹಿಂಚಾಚಿರುತ್ತವೆ. |