ಡಯೋಸ್ಪೈರಾಸ್ ಬಕ್ಸಿಪೋಲಿಯ (Bl.) Heirn. - ಎಬೆನೇಸಿ

Synonym : ಲ್ಯೂಕೋಸೈಲಮ್ ಬಕ್ಸಿಪೋಲಿಯಮ್ Blume ಮತ್ತು ಡಯೋಸ್ಪೈರಾಸ್ ಮೈಕ್ರೋಫಿಲ್ಲ Bedd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು ಹಲವು ವೇಳೆ ಚಕ್ಕೆ ರೂಪದಲ್ಲಿರುತ್ತದೆ
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ದಟ್ಟವಾದ ಹಾಗೂ ಉದ್ದವಾದ ರೋಮಗಳಿಂದ ಕೂಡಿರುತ್ತವೆ; ಎಳೆಯದಾದ ಮರಗಳಲ್ಲಿ ಕೊಂಬೆಗಳು ಸುತ್ತು ಜೋಡನಾ ವ್ಯವಸ್ತೆಯಲ್ಲಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು ಉಪ-ತೊಟ್ಟು ರೀತಿಯಲ್ಲಿದ್ದು 0.1 ಸೆಂ.ಮೀ ಉದ್ದವಿರುತ್ತವೆ; ಪತ್ರಗಳು 2 - 4 X 1 –1. 5 ಸೆಂ.ಮೀ. ಗಾತ್ರ, ಅಂಡವೃತ್ತ ಅಥವಾ ಅಂಡವೃತ್ತ –ಅಂಡದ ಆಕಾರ ಚೂಪಾದ ತುದಿ, ಚೂಪಾದ ಬುಡ, ಕಾಗದವನ್ನೋಲುವ, ಮೇಲ್ಮೈ ಹೊಂದಿರುತ್ತವೆ; ಪತ್ರಗಳು ಎಳೆಯದ್ದಾಗಿದ್ದಾಗ ಹಳದಿ ಬಣ್ಣದ ರೇಷ್ಮೆಯಂತಹ ರೋಮಗಳನ್ನು ಎಲ್ಲೆಡೆ ಹೊಂದಿದ್ದು ಬಲಿತಾಗ ರೋಮರಹಿತವಾಗಿರುತ್ತವೆ, ಪತ್ರಗಳು ಒಣಗಿದಾಗ ಮೇಲ್ಭಾಗದಲ್ಲಿ ಕಡು ಕಂದು ಹಾಗೂ ತಳಭಾಗ ತೆಳು ಕಂದು ಬಣ್ಣ ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ.; ಎರಡನೇ ದರ್ಜೆಯ ನಾಳಗಳು 3 – 5 ಜೋಡಿಗಳಿದ್ದು ಪ್ರಮುಖವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಒಂದರಿಂದ ನಾಲ್ಕು ಜೊತೆಗಿದ್ದು, ಕಿರಿದಾದ, ಉಪ-ತೊಟ್ಟುಸಹಿತವಾದ, ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ಉಪ-ತೊಟ್ಟು ಸಹಿತವಾಗಿದ್ದು,ಒಂಟಿಯಾಗಿ ಅಕ್ಷಾಕಂಕುಳಿನಲ್ಲಿರುತ್ತವೆ
ಕಾಯಿ /ಬೀಜ : ಬೆರ್ರಿಗಳು ಅಂದಾಜು 1.4 ಸೆಂಮೀ.ಉದ್ದವಿದ್ದು ದೃಢವಾದ ಪುಷ್ಪಪಾತ್ರೆ ಸಮೇತವಾಗಿರುತ್ತವೆ; ಬೀಜ ಒಂದು ಅಥವಾ ಎರಡು ಇರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 900 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಮತ್ತು ಅರೆ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ..

ವ್ಯಾಪನೆ :

ಇಂಡೋಮಲೇಸಿಯ; ಪಶ್ಚಿಮ ಘಟ್ಟದ ಮಧ್ಯ ಸಹ್ಯಾದ್ರಿಯಲ್ಲಿನ ಮಧ್ಯ ಮತ್ತು ಉತ್ತರ ಮಲೆನಾಡಿನ ಕಾಡುಗಳಲ್ಲಿ ಸಾಮಾನ್ಯವಾಗಿ ಹಾಗೂ ದಕ್ಷಿಣ ಸಹ್ಯಾದ್ರಿಯಲ್ಲಿನ ತೆರೆದ ಪ್ರದೇಶಗಳಲ್ಲಿ ಈ ಪ್ರಭೇದ ಹಾಗೂ ಕಂಡುಬರುತ್ತದೆ.

ಗ್ರಂಥ ಸೂಚಿ :

Trans. Cambridge Philos.Soc.12:218.1873;Singh, Monograph on Indian Diospyros L.(Persimmon, Ebony) Ebenaceae 57.2005; Gamble, Fl. Madras 2: 776.19979 (rep.ed.); Sasidharan, Biodiversity documentation for Kerala-Flowering Plants,part 6,270.2004:Saldanha,Fl. Karnataka 1:335.1996.

Top of the Page