ಡಯೋಸ್ಪೈರಾಸ್ ಅಟ್ರಾಟ (Thw.) Alston - ಎಬೆನೇಸಿ

Synonym : ಡಯೋಸ್ಪೈರಾಸ್ ಎಂಬ್ರಿಯಾಪ್ಟೆರಿಸ್ Pers. var. ಅಟ್ರಾಟ Thw.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಆನಿಕೆಗಳುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪು ಬಣ್ಣದಲ್ಲಿದ್ದು ನಯವಾಗಿರುತ್ತವೆ ಹಾಗೂ ಚಕ್ಕೆ ರೂಪದಲ್ಲಿರುತ್ತವೆ;
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ಹಳದಿ ಬಣ್ಣದಲ್ಲಿರುತ್ತವೆ; ಅಗ್ರದಲ್ಲಿನ ಹಾಗೂ ಅಕ್ಷಾಕಂಕುಳಿನಲ್ಲಿರುವ ಚಿಗುರು ಮೊಗ್ಗುಗಳು ಕಪ್ಪು ಬಣ್ಣ ಹೊಂದಿದ್ದು ರೋಮಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 1ರಿಂದ 1.5 ಸೆಂ.ಮೀಉದ್ದವಿರುತ್ತವೆ. ಪತ್ರಗಳು 8.5 -20 X 3-7 ಸೆಂ.ಮೀ. ಗಾತ್ರ, ಅಂಡವೃತ್ತ-ಚತುರಸ್ರ ದಿಂದ ಅಂಡವೃತ್ತ –ಭರ್ಜಿಯ ಆಕಾರ, ಚೂಪಾದುದರಿಂದ ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಒಳಬಾಗಿದ ಬುಡ, ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳಗಳು ಪತ್ರದ ಮೇಲ್ಭಾಗದಲ್ಲಿಕಾಲುವೆ ಗೆರೆಗಳನ್ನೊಳಗೊಂಡಿರುತ್ತವೆ ಹಾಗೂ ತಳ ಭಾಗದಲ್ಲಿ ದಪ್ಪನಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 5 ರಿಂದ 9ಜೋಡಿಗಳಿದ್ದು, ತಳಗಿನ ಜೋಡಿಗಳು ಮೇಲಿನ ಜೋಡಿಗಳಿಗಿಂತ ಹೆಚ್ಚು ಸನಿಹವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ಪತ್ರದ ಎರಡೂ ಬದಿಯಲ್ಲಿ ಜಾಲಬಂಧನಾಳ ವಿನ್ಯಾಸದಲ್ಲಿರುತ್ತವೆ .
ಪುಷ್ಪಮಂಜರಿ/ಹೂಗಳು : ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು (3ರಿಂದ8)ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಕಿರಿದಾದ ತೊಟ್ಟು ಹೊಂದಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ,
ಕಾಯಿ /ಬೀಜ : ಬೆರ್ರಿಗಳು7 ಸೆಂ. ಮೀ. ವ್ಯಾಸ ಹೊಂದಿದ್ದು ಗೋಳಾಕಾರದಲ್ಲಿರುತ್ತವೆ ಹಾಗೂ ತುಕ್ಕುಮಿಶ್ರಿತ ಕಂದು ಬಣ್ಣದ 22222(scurvy) ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ;ಕಾಯಿಗಳ ಪುಷ್ಪಪಾತ್ರೆ ಎಲೆರೂಪದಲ್ಲಿದ್ದು ಒಳಭಾಗದಲ್ಲಿ ದಟ್ಟವಾದ ಹಾಗೂ ಕಪ್ಪು ರೋಮಗಳನ್ನೊಳಗೊಂಡಿರುತ್ತವೆ; ಬೀಜಗಳು 8.

ಜೀವಪರಿಸ್ಥಿತಿ :

ಮಧ್ಯಮ (1000 ದಿಂದ 1400 ಮೀ) ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಉಪ- ಮೇಲ್ಛಾವಣಿಯಲ್ಲಿ ಈ ಸ ಸ್ಯ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Triman, Handb. Fl. Sri Lanka 6:180 1931;Singh, Monograph on Indian Diospyros L.(persimmon, Ebony)Ebenaceae 46.2005

Top of the Page