ಡಯೋಸ್ಪೈರಾಸ್ ಅಫಿನಿಸ್ Thw. - ಎಬೆನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ ಎತ್ತರದವರೆಗೆ ಬೆಳೆಯುವ ಸಾಧಾರಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಪ್ಪಾಗಿದ್ದು ಅನಿಯತವಾಗಿ ಸುಲಿಯುವ ಮಾದರಿಯಲ್ಲಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆ ಯಲ್ಲಿದ್ದು ಕಾಂಡದ ಎರಡೂ ಕಡೆಯ ಎದುರು ಬದರಿನ ಸಾಲಿನಲ್ಲಿರುತ್ತವೆ; ಎಲೆ ತೊಟ್ಟುಗಳು 0.5 ರಿಂದ 0.7 ಸೆಂ.ಮೀ. ಉದ್ದವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 5.5 -9 X 2 -3.8 ಸೆಂ.ಮೀ. ಗಾತ್ರ ಹೊಂದಿದ್ದು ಭರ್ಜಿಯಿಂದ ಹಿಡಿದು ಸಂಕುಚಿತ ಅಂಡವೃತ್ತ – ಧೀರ್ಘಚತುರಸ್ರದ ಆಕಾರದಲ್ಲಿದ್ದು ಮೊಂಡು ಅಗ್ರವುಳ್ಳ ಚೂಪಾದ ತುದಿ, ಚೂಪಾದ ಬುಡ, ತೊಗಲನ್ನೋಲುವ ಮೇಲ್ಮೈ ಹಾಗೂ ಹೊಳಪನ್ನು ಹೊಂದಿರುತ್ತವೆ;ಎರಡನೇ ದರ್ಜೆಯ ನಾಳಗಳು 8-11 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧನಾಳ ವಿನ್ಯಾಸದಲ್ಲಿದ್ದು ಎಲೆಯ ಎರಡೂ ಬದಿಯಲ್ಲಿ ಪ್ರಮುಖವಾಗಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಕೆನೆ ಬಣ್ಣ ಹೊಂದಿರುತ್ತವೆ; ಗಂಡು ಪುಷ್ಪಮಂಜರಿಕೆಲವು ಹೂಗಳನ್ನೊಳಗೊಂಡ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಕಾಯಿಗಳು ಗೋಳಾಕಾರದಲ್ಲಿದ್ದು 2.5 ಸೆಂ.ಮೀ ವ್ಯಾಸವನ್ನು ಹೊಂದಿರುವ ಬೆರ್ರಿ ಮಾದರಿಯವು; ಬೀಜಗಳು 4 ಇದ್ದು ಚತುರಸ್ರಾಕಾರದಲ್ಲಿರುತ್ತವೆ.

ಜೀವಪರಿಸ್ಥಿತಿ :

600 ಮೀ.ಎತ್ತರದವರೆಗಿನ ಪ್ರದೇಶಗಳಲ್ಲಿನ ಒಣ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಪರೂಪವಾಗಿ ಬೆಳೆಯುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಗಳು ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ಅಗಸ್ತ್ಯಮಲೆ ಬೆಟ್ಟದ ಗಾಳಿ ಮರೆಯ ದಿಕ್ಕಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ಗ್ರಂಥ ಸೂಚಿ :

Thwaites, Enum. Pl. Zey.179.1860; Singh, Monograph on Indian Diospyros L. (Persimmon, Ebony) Ebenaceae. 37.2005;Gamble, Fl.Madras 1:773.1997(re.ed.);

Top of the Page