ಡಿಲ್ಲೀನಿಯ ಇಂಡಿಕ Roxb. - ಡಿಲ್ಲೀನಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಎಲೆಉದುರುವ ಜಾತಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದುಮಿಶ್ರಿತ ಬಿಳಿ ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿ ಸುಲಿಯುವ ಮಾದರಿಯವು.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ತೆಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಎಲೆತೊಟ್ಟು ಕಾಲುವೆ ಗೆರೆಯನ್ನು ಹೊಂದಿರುತ್ತವೆ ಹಾಗೂ ಬುಡಬಾಗದಲ್ಲಿ ಕೋಶ-ಪೊರೆಗಳ ಸಮೇತವಿರುತ್ತವೆ ಮತ್ತು ಉದುರಿದಾಗ ವಲಯಾಕಾರದ ಗುರುತುಗಳನ್ನು ಮೂಡಿಸುತ್ತವೆ;ಪತ್ರಗಳು 60X20 ವರೆಗಿನ ಗಾತ್ರ, ವಿಶಾಲವಾದ ಬುಗುರಿಯಾಕಾರವನ್ನು ಹೊಂದಿದ್ದು ಚೂಪಾದ ಅಥವಾ ತುಸುವಾಗಿ ಕ್ರಮೇಣವಾಗಿ ಚೂಪಾಗುವ ತುದಿ, ಬೆಣೆಯಾಕಾರದ ಬುಡ,ಉದ್ದುದ್ದವಾದ ಮೃದು ರೋಮಗಳನ್ನು ಹೊಂದಿದ ಹಲ್ಲುಗಳನ್ನುಳ್ಳ ದಂತಿತ ಮಾದರಿಯ ಅಂಚನ್ನು ಹೊಂದಿರುತ್ತವೆ;ಮಧ್ಯನಾಳ ಮತ್ತು ಪತ್ರದ ತಳಭಾಗದಲ್ಲಿನ ನಾಳಗಳು ಮೃದುತುಪ್ಪಳದಿಂದ ಕೂಡಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅನೇಕವಿದ್ದು ಸಮಾನಾಂತರದಲ್ಲಿದ್ದು ಪತ್ರದ ಅಂಚಿನಲ್ಲಿಯ ಹಲ್ಲು ಗಳಲ್ಲಿ ಕೊನೆಗೊಳ್ಳುತ್ತವೆ;ಮೂರನೆಯ ದರ್ಜೆಯ ನಾಳಗಳು ಎಲೆದಿಂಡಿಗೆ ಅಡ್ಡವಾಗಿ ಕೂಡುವಂತಹವು.
ಪುಷ್ಪಮಂಜರಿ/ಹೂಗಳು : ಹೂಗಳುಹಳದಿ ಬಣ್ಣದಲ್ಲಿದ್ದು ಎಲೆಗಳಿಲ್ಲದ ಹಳೆಯ ಕೊಂಬೆಗಳ ಮೇಲೆ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಬಿರಿಯದ, ದುಂಡಾಕಾರದ ಅಂಡಕೋಶಗಳಾಗಿದ್ದು,ಮಾಂಸಲವಾಗಿದ್ದು, ಮಂದವಾದ ಪುಷ್ಪಪಾತ್ರೆಯ ಪತ್ರಗಳಿಂದ ಸುತ್ತುವರೆದಿರುತ್ತವೆ;ಒಂದು ಕೋಶದಲ್ಲಿ ಒಂದರಿಂದ ಎರಡು ಬೀಜಗಳಿರುತ್ತವೆ.

ಜೀವಪರಿಸ್ಥಿತಿ :

1400 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಚೀನಾದಿಂದ ಇಂಡೋಮಲೇಶಿಯ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Roxb. Pl.Cor. 20.1795; Gamble,Fl.Madras 1:8.1997(re.ed.); Sasidharan, Biodiversity documentation for Kerala- Flowering Plants, part 6:14.2004; Saldanha, Fl.Karnataka 2:186.1996

Top of the Page