English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 12 ಮೀ. ಎತ್ತರದವರೆವಿಗೆ ಬೆಳಯುವ ಮಧ್ಯಮ ಎತ್ತರದ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಂದು ಬಣ್ಣ ಹೊಂದಿದ್ದು ವಾಯು ವಿನಿಮಯ ಸೂಕ್ಷ್ಮ ಬೆಂಡು ರಂಧ್ರ ಸಮೇತವಾಗಿರುತ್ತದೆ; ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿರುತ್ತವೆ;ತೊಟ್ಟು 5 ಸೆಂ.ಮೀ. ಉದ್ದವಿರುತ್ತದೆ; ಪತ್ರಗಳು 7 - 12.5 X 3.7-5 ಸೆಂ.ಮೀ. ಗಾತ್ರ, ಅಂಡವೃತ್ತ-ಚತುರಸ್ರಾಕಾರ ಅಥವಾ ಬುಗುರಿಯ ಆಕಾರ ಹೊಂದಿದ್ದು, ಅಗ್ರದಲ್ಲಿ ಸೂಕ್ಷ್ಮವಾದ ಮೊನಚು ಮುಳ್ಳನ್ನು ಹೊಂದಿದ ಮೊಂಡಾದ, ಕ್ರಮೇಣ ಚೂಪಾಗುವ ತುದಿ, ಚೂಪಾಗಿರುವ ಬುಡ, ನಯವಾದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ,ತಳಭಾಗ ಮಾಸಲು ಬಣ್ಣದಲ್ಲರುತ್ತದೆ;ಎರಡನೇ ದರ್ಜೆಯ ನಾಳಗಳು ಸುಮಾರು 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು. |
| ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿರುವ ಮಧ್ಯಾಭಿಸರ ಮಾದರಿಯವು; ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ತೊಟ್ಟು ರಹಿತವಾಗಿರುತ್ತವೆ; ಪರಾಗಾಶಯಗಳು ದೊಡ್ಡ ಗಾತ್ರದಲ್ಲಿದ್ದು ನಸುಗೆಂಪು ಬಣ್ಣ ಹೊಂದಿರುತ್ತವೆ. |
| ಕಾಯಿ /ಬೀಜ : | ಕಾಯಿಗಳು ಡ್ರೂಪ್ ಮಾದರಿಯವು, ಆಕಾರದಲ್ಲಿ ಅಂಡಾಕಾರ ಅಥವಾ ಚತುರಸ್ರಾಕಾರ ಹೊಂದಿದ್ದು ಫಲಾವರಣ ದಾರು ರೂಪದಲ್ಲಿರುತ್ತದೆ. |