ಆಲ್ಫೋನ್ಸಿಯ ಸ್ಲೀರೋಕಾರ್ಪ Champ. ex J. Hk. & Thoms. - ಅನೋನೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆಯ ಮೇಲ್ಮೈ ಸೂಕ್ಷ್ಮವಾಗಿ ಸೀಳಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳುವಾಗಿದ್ದು, ಗುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯವಾಗಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತದೆ. ತೊಟ್ಟು 0.5 ರಿಂದ 0.7 ಸೆಂ.ಮೀ. ಉದ್ದವಿದ್ದು ರೋಮರಹಿತ ಅಥವಾ ಅತಿ ಸೂಕ್ಷ್ಮವಾದ ಮೃದು ತುಪ್ಪಳದಿಂದ ಕೂಡಿರುತ್ತದೆ. ಪತ್ರಗಳು 5 - 8 × 1.8 - 3 ಸೆಂ.ಮೀ. ಗಾತ್ರದಲ್ಲಿದ್ದು, ಭರ್ಜಿಯಾಕಾರದವುಗಳಾಗಿದ್ದು ಚೂಪಲ್ಲದ ತುದಿ, ಚೂಪಾದುದರಿಂದ ಹಿಡಿದು ಒಳಬಾಗಿದ ತಳವುಳ್ಳ ಬುಡಭಾಗವನ್ನು ಹೊಂದಿದ್ದು, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತವೆ. ಎರಡನೇ ದರ್ಜೆಯ ನಾಳಗಳು ಸುಮಾರು 10 ಜೋಡಿಗಳಿದ್ದು ಮೂರನೇ ದರ್ಜೆಯ ನಾಳಗಳು ಸ್ಥೂಲವಾದ ಜಾಲಬಂಧ ನಾಳವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅತಿಸಣ್ಣ ಹಾಗೂ ಒಂಟಿಯಾಗಿದ್ದು, ಅಕ್ಷಾಕಂಕುಳಿನಲ್ಲಿರುವ ಪುಷ್ಪವೃತ್ತದ ಮೇಲೆ ಗುಚ್ಛಾಕಾರದಲ್ಲಿರುತ್ತವೆ, ಹೂ ತೊಟ್ಟುಗಳು ಮೃದು ತುಪ್ಪಳದಿಂದ ಆವೃತ್ತವಾಗಿದ್ದು 0.5 - 0.6ಸೆಂ.ಮೀ. ಉದ್ದವಿರುತ್ತದೆ.
ಕಾಯಿ /ಬೀಜ : ಕಾಯಿಗಳು ಬೆರ್ರಿಪುಂಜಫಲ ಮಾದರಿಯದಲ್ಲಿದ್ದು ಒಂದು ಪುಂಜಫಲದಲ್ಲಿ ಆ ಬೆರ್ರಿಗಳವರೆಗಿರುತ್ತದೆ, ಉಪ-ಗುಂಡಾಕೃತಿಯನ್ನುಳ್ಳ ಬೆರ್ರಿಗಳು, ದಟ್ಟ ಮೃದು ತುಪ್ಪಳ ಸಮೇತವಾಗಿದ್ದು ಗುಬುಟುಗಳನ್ನು ಹೊಂದಿರುತ್ತವೆ. ಬೆರ್ರಿಗಳು 3ಕ್ಕಿಂತ ಹೆಚ್ಚು ಅನುಕ್ರಮವಾಗಿ ಎರಡು ಸಾಲಿನಲ್ಲಿ ಜೋಡನೆಯಲ್ಲಿರುವ ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟಕ್ಕಿಂತ 600ಮೀ ವರೆವಿಗೆ ಬೆಳೆಯುವ ಒಣ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇಧ ಕಂಡು ಬರುತ್ತದೆ. (ಅಗಸ್ತ್ಯಮಲೈ ಶ್ರೇಣಿಯ ತಿರುನೆಲ್ವೆಲಿ ಬೆಟ್ಟಗಳಲ್ಲಿ ಈ ಸಸ್ಯ ಸಾಮಾನ್ಯವಾಗಿ ಕಾಣ ಸಿಗುತ್ತದೆ)

ಗ್ರಂಥ ಸೂಚಿ :

Enum. Pl. Zeyl. 11.1858; Gamble, Fl. Madras 1: 23.1997 (re.ed); Sasidharan, Biodiversity documentation for Kerala- Flowering Plants, part 6: 15. 2004.

Top of the Page