ಕ್ರಿಪ್ಟೋಕಾರ್ಯ ನೀಲ್ಘೆರ್ರೆನ್ಸಿಸ್ Meisner - ಲಾರೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣ ಹೊಂದಿದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿ -ರುತ್ತವೆ;ತೊಟ್ಟುಗಳು 0.5-0.7 ಸೆಂ.ಮೀ. ಉದ್ದವಿರುತ್ತದೆ ಮತ್ತು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿರುತ್ತವೆ ಹಾಗೂ ದಟ್ಟ ಮೃದು ತುಪ್ಪಳ ಸಮೇತವಿರುತ್ತವೆ; ಪತ್ರಗಳು 6-14 X3-6 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಅಂಡವೃತ್ತ-ಚತುರಸ್ರದಿಂದ ಅಂಡವೃತ್ತ -ಅಂಡದವರೆಗಿನ ಆಕಾರ ಹೊಂದಿದ್ದು ದುಂಡಾದ-ಚೂಪಲ್ಲದ ಅಥವಾ ಕಿರಿದಾದ ಕ್ರಮೇಣ ಚೂಪಾಗುವ ತುದಿ,ದುಂಡಾದುದರಿಂದ ಚೂಪಾದ ಬುಡಹೊಂದಿರುತ್ತವೆ.;ಪತ್ರದ ತಳಭಾಗ ಕೊನೇ ಪಕ್ಷ ನಾಳಗಳ ಮೇಲಾದರೂ ದಟ್ಟ ಮೃದು ತುಪ್ಪಳವನ್ನು ಹೊಂದಿರುತ್ತದೆ ಮತ್ತು ಮಾಸಲು ಬೂದು ಹಸಿರು ಬಣ್ಣ ಹೊಂದಿರುತ್ತದೆ; ಮಧ್ಯನಾಳ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 7 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಕಿರುಗಾತ್ರವುಳ್ಳ ನಿಬಿಡವಾದ ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಕಂದು ಮಿಶ್ರಿತ ಹಳದಿಬಣ್ಣವುಳ್ಳ ದಟ್ಟ ಮೃದು ತುಪ್ಪಳದಿಂದ ಕೂಡಿದ ಪುನರಾವೃತ್ತಿಯಾಗಿ ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಅಂಡ-ಅಂಡವೃತ್ತದ ಆಕಾರದಲ್ಲಿದ್ದು ಕಪ್ಪು ಬಣ್ಣ ಹೊಂದಿದ್ದು ಒಂದು ಬೀಜವನ್ನು ಒಳಗೊಂಡಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 1000 ಮತ್ತು 2000 ಮೀ. ನಡುವಿನ ಉನ್ನತ ಎತ್ತರದಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತದ ಪರ್ಯಾಯ ದ್ವೀಪ; ಪಶ್ಚಿಮ ಘಟ್ಟದಲ್ಲಿ ಈ ಸಸ್ಯ, ಅಣ್ಣಾಮಲೈ,ಪಳನಿ ನೀಲಗಿರಿ ಮತ್ತು ಚಿಕ್ಕಮಗಳೂರು ಪ್ರದೇಶದ ಕುದುರೆಮುಖದಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

DC., Prodr. 15:71.1864;Gamble,Fl.Madras 2:1219. 1993 (rep.ed.); Sasidharan, Biodiversity documentation for Kerala Flowering Plants, part 6: 397. 2004; Saldanha, Fl. Karnataka 1:64.1996.

Top of the Page