English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು. |
ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆ ಕಿರುಕೊಂಬೆಗಳು ನಕ್ಷತ್ರ-ಮೃದುತುಪ್ಪಳದಿಂದ ಕೂಡಿರುತ್ತವೆ. |
ಎಲೆಗಳು : | ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಗರಿ ರೂಪಿಗಳಾಗಿದ್ದು ಉದುರಿಹೋಗುವಂತಹವು;ತೊಟ್ಟುಗಳು 0.7 ಸೆಂ.ಮೀ. ವರೆಗಿನ ಉದ್ದವಿದ್ದು, ದುಂಡಾಗಿದ್ದು ದೃಢವಾಗಿರುತ್ತವೆ;ಪತ್ರಗಳು 18 X 5 ಸೆಂ. ಮೀ. ಗಾತ್ರ, ಅಂಡವೃತ್ತ-ಚತುರಸ್ರದ ಆಕಾರ ಹೊಂದಿರುತ್ತವೆ;ತುದಿ ಕ್ರಮೇಣ ಚೂಪಾಗುವ ರೀತಿಯಲ್ಲಿ ಇರುತ್ತದೆ,ಬುಡ ಚೂಪಾಗಿರುವುದರಿಂದ ದುಂಡಾಕಾರದವರೆಗಿನ ಮಾದರಿಯಲ್ಲಿರುತ್ತದೆ, ಅಂಚು ದಂತಗಳ ಬಳಿಯಲ್ಲಿ ರಸಗ್ರಂಥಿಗಳನ್ನೊಳಗೊಂಡ ದುಂಡೇಣಿನ ದಂತಗಳಿಂದ ಕೂಡಿರುತ್ತದೆ ಪತ್ರಗಳು ಎಳೆಯದಾಗಿದ್ದಾಗ ಮೇಲ್ಮೈ ನಕ್ಷತ್ರ-ರೋಮಗಳ ಸಹಿತವಾಗಿದ್ದು ನಂತರ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಕ್ರಮೇಣವಾಗಿ ಬಾಗುವ 8-12 ಜೋಡಿಗಳಿರುತ್ತವೆ ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು. |
ಪುಷ್ಪಮಂಜರಿ/ಹೂಗಳು : | ಹೂಗಳು ಏಕಲಿಂಗಿಗಳಾಗಿರುತ್ತವೆ.ಗಂಡು ಹೂಗಳು ಗುಚ್ಛಗಳಲ್ಲಿದ್ದು ಉದ್ದವಾದ ಕದಿರು ಪುಷ್ಪಮಂಜರಿಯಲ್ಲಿ ಇರುತ್ತವೆ; ಹೆಣ್ಣು ಹೂಗಳು ಕಿರಿದಾದ ಕದಿರು ಪುಷ್ಪಮಂಜರಿಯಲ್ಲಿ ಇರುತ್ತವೆ. |
ಕಾಯಿ /ಬೀಜ : | ಸಂಪುಟ ಫಲಗಳು 1.2 ಸೆಂ.ಮೀ. ಅಡ್ಡಗಲದ ಅಳತೆ ಹೊಂದಿದ್ದು, 3 ರಿಂದ 2 ಕೋಶಗಳನ್ನು ಹೊಂದಿರುತ್ತವೆ;ಬೀಜಗಳು 3 ಇದ್ದು ಉಪಗೋಳಾಕಾರದವುಗಳಾಗಿರುತ್ತವೆ. |