English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಅಭಿಮುಖ,ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 –8 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ, ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಪತ್ರಗಳು 7- 17(-23) X 7.5 –15 ಸೆಂ.ಮೀ. ಗಾತ್ರ,ವಿಶಾಲ ಅಂಡವೃತ್ತ- ಅಂಡಾಕಾರ ಅಥವಾ ಉಪಅಂಡಾಕಾರದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಹೃದಯಾಕಾರದ ಬುಡ, ನಯವಾದ ಅಥವಾ ಅಥವಾ ದಂತಿತವಾದ ಅಂಚು ,ಉಪ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಮೇಲೆದ್ದಿದ್ದು ನಸುಗೆಂಪಿನಿಂದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ; ಪತ್ರಗಳ ಬುಡದಲ್ಲಿ 5 – 7 ನಾಳಗಳಿರುತ್ತವೆ; ಎರಡನೇ ದರ್ಜೆಯ ಅಂದಾಜು 2 ರಿಂದ 3 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು,ಲಂಬ ರೇಖೆಗೆ ಸಮಕೋನದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು 18 ಸೆಂ.ಮೀವರೆಗಿನ ಉದ್ದವನ್ನು ಹೊಂದಿರುತ್ತವೆ, ನಸುಗೆಂಪಿನಿಂದ ಕೂಡಿದ ಹಳದಿ ಬಣ್ಣದ ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ ; ಹೂಗಳು ಉಭಯ ಪಾರ್ಶ್ವ ಅಸಮಾಂಗತೆಯುಳ್ಳ ಮಾದರಿಯಲ್ಲಿದ್ದು ಬಿಳಿಬಣ್ಣದವುಗಳಾಗಿರುತ್ತವೆ. |
| ಕಾಯಿ / ಬೀಜ : | ಡ್ರೂಪ್ಗಳು ಕಪ್ಪಾಗಿರುತ್ತವೆ ಹಾಗೂ ಹೆಚ್ಚೂ ಕಡಿಮೆ ಗೋಳಾಕಾರದಲ್ಲಿದ್ದು,ವಿಕಸಿತಗೊಂಡ,ನಸುಗೆಂಪು ಬಣ್ಣದ ಪುಷ್ಪ ಪಾತ್ರೆಯ ಮೇಲೆ ಆಸೀನವಾಗಿರುತ್ತವೆ. |