English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ
| ಪ್ರಕೃತಿ : | 6 ಮೀ. ಎತ್ತರದವರೆಗಿನ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ದುಂಡಾಗಿದ್ದು, ಸೂಕ್ಷ್ಮ ರೋಮಗಳನ್ನು ಹೊಂದಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು, ಕಿರುಗಾತ್ರದವುಗಳಾಗಿದ್ದು ಅಂದಾಜು 0.1 ಸೆಂ.ಮೀ. ಉದ್ದವಿದ್ದು ಉಪಶಾಶ್ವತವಾಗಿರುತ್ತವೆ; ತೊಟ್ಟುಗಳು 0.3 -0.5 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ,ಮತ್ತು ಒಣಗಿದಾಗ ಸುಕ್ಕು ಸುಕ್ಕಾಗಿರುತ್ತವೆ,ಎಳೆಯದಾಗಿದ್ದಾಗ ಸುಕ್ಕು ಸುಕ್ಕಾದ ರೋಮಗಳಿಂದ ಕೂಡಿರುತ್ತವೆ;ಪತ್ರಗಳು 7-12 X 2.5-3.3 ಸೆಂ.ಮೀ. ಗಾತ್ರ,ಸಂಕುಚಿತ ಅಂಡವೃತ್ತದಿಂದ ಭರ್ಜಿವರೆಗಿನ ಆಕಾರ ಹೊಂದಿದ್ದು,ಉದ್ದವಾದ ಕ್ರಮೇಣ ಚೂಪಾಗುವ ತುದಿ, ಚೂಪಾದ ಬುಡ, ನಯವಾದ ಅಂಚು ಹೊಂದಿದ್ದು, ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಹೂಗಳು ಏಕಲಿಂಗಿಗಳಾಗಿದ್ದು ,ಉಪತೊಟ್ಟುಗಳನ್ನು ಹೊಂದಿದ್ದು,ಅಕ್ಷಾಕಂಕುಳಿನಲ್ಲಿ ಗುಚ್ಛಗಳಲ್ಲಿರುತ್ತವೆ. |
| ಕಾಯಿ / ಬೀಜ : | ಸಂಪುಟ ಫಲಗಳು 3-ಕವಾಟಗಳನ್ನೊಳಗೊಂಡಿದ್ದು,1.5 ಸೆಂ.ಮೀ, ಅಡ್ಡಗಲತೆ ಹೊಂದಿರುತ್ತವೆ;ಪ್ರತಿ ಕೋಶದಲ್ಲಿ 2 ಬೀಜಗಳಿರುತ್ತವೆ. |