ಕ್ಲೀ ಡಿಯಾನ್ ಸ್ಪೈಸಿಫ್ಲೋರಮ್ (Burm.f.) Merr. - ಯೂಫೊರ್ಬಿಯೇಸಿ

Synonym : ಅಕಾಲಿಫ ಸ್ಪೈಸಿಪ್ಲೋರ Burm.f. ಮತ್ತು ಕ್ಲೀಡಿಯಾನ್ ಜವಾನಿಕಂ Bl.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ ಹಾಗೂ ಸೂಕ್ಷ್ಮವಾದ ವಾಯುವಿನಿಮಯ ಬೆಂಡುರಂಧ್ರಗಳ ಸಮೇತವಾಗಿರುತ್ತದೆ; ಕಚ್ಚು ಮಾಡಿದ ಜಾಗ ಮಂದವಾದ ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಉದುರಿ ಹೋಗುವಂತಹವು;ತೊಟ್ಟುಗಳು 2 - 3 ಸೆಂ.ಮೀ.ವರೆಗಿನ ಉದ್ದವಿದ್ದು ಆಳವಿಲ್ಲದ ಕಾಲುವೆಗೆರೆಗಳ ಸಮೇತವಿರುತ್ತವೆ ಹಾಗೂ ಎರಡೂ ತುದಿಯಲ್ಲಿ ಉಬ್ಬಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 8 -20 X 3 – 8 ಸೆಂ .ಮೀ. ಗಾತ್ರ, ಸಂಕುಚಿತ ಅಂಡವೃತ್ತ ದಿಂದ ಬುಗುರಿವರೆಗಿನ ಆಕಾರ ಹೊಂದಿರುತ್ತವೆ; ತುದಿ ಹಠಾತ್ತಾಗಿ ಕ್ರಮೇಣ ಚೂಪಾಗುವ ರೀತಿಯಲ್ಲಿರುತ್ತದೆ, ಬುಡ ಚೂಪಾಗಿರುವುದರಿಂದ ಬೆಣೆಯಾಕಾರದವರೆಗಿನ ಮಾದರಿಯಲ್ಲಿರುತ್ತದೆ, ಅಂಚು ಹೆಚ್ಚಿನ ಅಂತರವುಳ್ಳ ಗರಗಸ ದಂತಗಳಿಂದ ಕೂಡಿರುತ್ತದೆ. ಮೇಲ್ಮೈ ಉಪ-ತೊಗಲನ್ನೋಲುವ ರೀತಿಯಲ್ಲಿದ್ದು ರೋಮರಹಿತವಾಗಿರುತ್ತವೆ, ಪತ್ರದ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ; ಪತ್ರ ಮತ್ತು ಎಲೆತೊಟ್ಟುಗಳು ಸಂಧಿಸುವ ಭಾಗದಲ್ಲಿ ಒಂದು ಜೋಡಿ ರಸಗ್ರಂಥಿ ಇರುತ್ತದೆ;ಎರಡನೇ ದರ್ಜೆಯ ನಾಳಗಳು 5-6 ಜೋಡಿಗಳಿರುತ್ತವೆ ಹಾಗೂ ಅಕ್ಷಾಕಂಕುಳಿನಲ್ಲಿ ರೋಮ ಸಹಿತವಾದ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ.ಗಂಡು ಹೂಗಳು ಉದ್ದವಾದ ಅಕ್ಷಾಕಂಕುಳಿನಲ್ಲಿರುವ ಕದಿರು ಮಧ್ಯಾಭಿಸರ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ, ಪುಷ್ಪವೃಂತ ಉದ್ದವಾಗಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು ಶಾಶ್ವತವಾದ ಶಲಾಖೆ ಮತ್ತು ಶಲಾಕಾಗ್ರಗಳನ್ನು ಹೊಂದಿದ್ದು ಸಾಧಾರಣವಾಗಿ 2-ಹಾಲೆಯುಕ್ತ ಅಥವಾ ಕೆಲವು ವೇಳೆ 3 ಹಾಲೆಗಳ ಸಮೇತವಿರುತ್ತವೆ; ಪ್ರತಿ ಕೋಶದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

900 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಫ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದಲ್ಲಿ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ ಕಂಡುಬರುತ್ತದೆ.

ಗ್ರಂಥ ಸೂಚಿ :

Interpr. Rumph. Amboin. 322.1917;Gamble, Fl. Madras 2:1325.1993 (rep.ed.); Sasidharan, Biodiversity documentation for Kerala – Flowering plants, part 6, 412.2004;Saldanha, 2; 124.1996.

Top of the Page