ಸಿಪಡೆಸ್ಸ ಬ್ಯಾಕ್ಸಿಫೆರ (Roth) Miq. - ಮೀಲಿಯೇಸಿ

ಪರ್ಯಾಯ ನಾಮ : ಮೀಲಿಯ ಬ್ಯಾಕ್ಸಿಫೆರ Roth

Vernacular names : Tamil: ಅಕಿಲ್;ಚಂದನ ವೆಪ್ಪು;ಚುವನ್ನಕ್ಕಿಲ್;ಕರಡಿ;ಮಲವೆಪ್ಪುMalayalam: ಕಲ್ಗರಿಕೆ; ಕಾಲಾಧಿ;ಕರಡಿ;ಪಾರುಳಿ;ದಾಲ್ಮರ;ಕಲ್ಹತುರಿ;ಉರುಳಿ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಪೊದೆಗಳು ಅಥವಾ 5 ಮೀ. ಎತ್ತರ ಬೆಳೆಯುವ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು,ಸೂಕ್ಷ್ಮ ಬೆಂಡು ರಂಧ್ರಗಳ ಸಮೇತವಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯವು, ಅಸಮಸಂಖ್ಯಾ ಗರಿ ರೂಪಿಗಳಾಗಿದ್ದು 10 ರಿಂದ 28 ಸೆಂ.ಮೀ.ಉದ್ದ ಹೊಂದಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಹೆಚ್ಚಿನ ಸಂಧರ್ಭದಲ್ಲಿ ಕಿರುಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ ಹಾಗೂ ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ;ಸಂಯುಕ್ತ ಪರ್ಣದ ನಡುದಿಂಡು 4-12.5 ಸೆಂ ಮೀ. ಉದ್ದವಿದ್ದು ದುಂಡಾಗಿದ್ದು ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ; ಕಿರುತೊಟ್ಟು0.1 ರಿಂದ 0.3 ಸೆಂ.ಮೀ. ಉದ್ದವಿರುತ್ತವೆ; ಕಿರುಪತ್ರಗಳು ಅಭಿಮುಖಿ ಅಥವಾ ಉಪ-ಅಭಿಮುಖಿಗಳಾಗಿರುತ್ತವೆ,ಸಾಮಾನ್ಯವಾಗಿ ತುದಿಯಲ್ಲಿ ಒಂದು ಕಿರುಪತ್ರದ ಸಮೇತವಾಗಿ 4-5 ಜೋಡಿಗಳಿರುತ್ತವೆ ಕೆಲವು ವೇಳೆ 6 ಜೋಡಿಗಳಿರುತ್ತವೆ,ಗಾತ್ರ 2-10 X 1.3 – 4.5 ಸೆಂ.ಮೀ.ಇದ್ದು ಅಂಡವೃತ್ತದ ಆಕಾರ ಹೊಂದಿದ್ದು,ಚೂಪಾದುದರಿಂದ ಕ್ರಮೇಣವಾಗಿ ಚೂಪಾಗುವ ತುದಿ,ಬೆಣೆಯಾಕಾರದ ಅಥವಾ ಒಳಬಾಗಿದ ಬುಡ ಹೊಂದಿರುತ್ತವೆ;ಅಂಚು ಬುಡಬಾಗದಲ್ಲಿ ನಯವಾಗಿದ್ದು ತುದಿಯತ್ತ ಸರಿದಂತೆ ಒರಟಾದ ಗರಗಸ ದಂತಗಳ ಸಮೇತವಿರುತ್ತದೆ, ಮೇಲ್ಮೈ ಕಾಗದವನ್ನೋಲುವ ರೀತಿಯಿರುತ್ತದೆ, ಪತ್ರದ ತಳಭಾಗದಲ್ಲಿ ಕನಿಷ್ಠ ಪಕ್ಷ ನಾಳಗಳ ಮೇಲಾದರೂ ದಟ್ಟ ಮೃದು ತುಪ್ಪಳವಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತೆಳುವಾಗಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 5 ರಿಂದ 9 ಜೋಡಿಗಳು; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿದ್ದು ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು; ಹೂಗಳು ಬಿಳಿ ಬಣ್ಣ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರವಾಗಿದ್ದು 0.7 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿದ್ದು 5-pyrene ಸಮೇತವಿರುತ್ತವೆ; ಪ್ರತಿ ಪೈರೀನ್ ನಲ್ಲಿ1-2 ಬೀಜಗಳು ಇರುತ್ತವೆ.

ಜೀವಪರಿಸ್ಥಿತಿ :

ಈ ಪ್ರಭೇದ ಭಂಗಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಮತ್ತು ಎಲೆಯುದುರು ಕಾಡುಗಳ ಒಳಛಾವಣಿಯಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯ;ಪಶ್ಚಿಮ ಘಟ್ಟದ ಎಲ್ಲಾ ಭಾಗಗಳು.

ಗ್ರಂಥ ಸೂಚಿ :

Ann. Mus. Lugd.-Bat. 4: 6.1868;Gamble, Fl. Madras 1:176.1997(rep.ed.):Sasidharan, Biodiversity documentation for Kerala- Flowering Plants, part 6:89.2004.

Top of the Page