English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 22 ಮೀ. ಎತ್ತರದವರೆಗಿನ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಎಲೆತೊಟ್ಟುಗಳು 0.5 ರಿಂದ 0.8 ಸೆಂ.ಮೀ.ಉದ್ದವಿದ್ದು ,ಕಾಲುವೆ ಗೆರೆಯನ್ನು ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 9-15.5X 3-5 ಸೆಂ.ಮೀ. ಗಾತ್ರ, ಚತುರಸ್ರದಿಂದ ಅಂಡವೃತ್ತ-ಚತುರಸ್ರದವರೆಗಿನ ಆಕಾರ, ಕ್ರಮೇಣ ಚೂಪಾಗುವ ಅಥವಾ ಬಾಲರೂಪಿ-ಕ್ರಮೇಣವಾಗಿ ಚೂಪಾಗುವ ತುದಿ,ಚೂಪಾದ ಅಥವಾ ಬೆಣೆಯಾಕಾರದ ಬುಡ,ನಯವಾದ ಅಂಚು, ರೋಮರಹಿತವಾದ ತಳಭಾಗ, ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ಒಣಗಿದಾಗಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ; ಮಧ್ಯನಾಳ ಹೆಚ್ಚೂ ಕಡಿಮೆ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 12 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಪತ್ರದ ತಳಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವು;ಹೂಗಳ ಬಣ್ಣ ಬಿಳಿ. |
| ಕಾಯಿ / ಬೀಜ : | ಫಲಗಳು ಡ್ರೂಪ್ ಮಾದರಿಯವು; ಬೀಜ ಒಂದು. |