ಕ್ಯಾಸಿಯಾರಿಯ ರೂಬೆಸೆನ್ಸ್ Dalz. - ಫ್ಲಕೋರ್ಶಿಯೇಸಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 16 ಮೀ. ಎತ್ತರದವರೆಗಿನ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ದೊಡ್ಡ ಗಾತ್ರದ ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು ಅಂದಾಜು 1.5 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ ಹಾಗೂ ಕೆಂಪು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತವೆ; ಪತ್ರಗಳು 7 – 19 X 3 – 7.5 ಸೆಂ.ಮೀ. ಗಾತ್ರವಿದ್ದು ಅಂಡವೃತ್ತ – ಭರ್ಜಿಯ, ಚೂಪಲ್ಲದ ಅಥವಾ ಉದ್ದವಾದ,ತೀಕ್ಣಾಗ್ರ ತಿರುವಿಕೊಂಡಿರುವ ಕ್ರಮೇಣ ಚೂಪಾಗುವ ತುದಿ, ಅಸಮವಾದ ಅಥವಾ ಬೆಣೆಯಾಕಾರದ ಅಥವಾ ಒಳಬಾಗಿದ ಬುಡ ಮತ್ತುನಯವಾದ ಅಂಚು ಹೊಂದಿದ್ದು ಪತ್ರದ ಮೇಲ್ಭಾಗ ಹೊಳಪಿನಿಂದ ಕೂಡಿರುತ್ತದೆ, ಪತ್ರ ರೋಮರಹಿತವಾಗಿದ್ದು, ಪ್ರಕಾಶ ಭೇಧ್ಯ ಹಾಗೂ ಪಾರದರ್ಶಕವಾದ ಚುಕ್ಕೆ ಮತ್ತು ಗೆರೆಗಳಿಂದ ಕೂಡಿದ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ ಮತ್ತು ಒಣಗಿದಾಗ ಕಪ್ಪು ಮಿಶ್ರಿತ ಹಸಿರು ಬಣ್ಣದಲ್ಲಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳವಿನ್ಯಾಸವನ್ನು ಹೊಂದಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಅಂದಾಜು 0.4 ಸೆಂ.ಮೀ. ಅಡ್ಡಗಲತೆ ಹೊಂದಿದ್ದು ಹಸಿರು ಮಿಶ್ರಿತ ಬಿಳಿ ಬಣ್ಣವನ್ನು ಹೊಂದಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಅಂಡವೃತ್ತದ ಆಕಾರದಲ್ಲಿದ್ದು ಅಂದಾಜು 2 ಸೆಂ.ಮೀ. ಉದ್ದ ಹೊಂದಿರುತ್ತವೆ ಮತ್ತು ಕಳೆತಾಗ ಕಿತ್ತಳೆ ಮಿಶ್ರಿತ ಹಳದಿಬಣ್ಣದಲ್ಲಿರುತ್ತವೆ; ಬೀಜಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಪತ್ರೆ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

200 ರಿಂದ 1600 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಉಪಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Briq., Ann. Cons. Jard. Bot. Geneve 62.1898;Gamble,Fl. Madras 1:521. 1997(rep.ed.);Sasidharan, Biodiversity documentation for Kerala- Flowering Plants, part 6:31.2004.

Top of the Page