English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 10 ಮೀ. ಎತ್ತರದವರೆಗಿನ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ಉಪದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ತೊಟ್ಟುಗಳ ನಡುವೆ ಇದ್ದು ಉದುರಿ ಹೋದ ನಂತರ ಗುರುತುನ್ನು ಉಳಿಸುತ್ತವೆ; ತೊಟ್ಟು 0.5 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆಗೆರೆ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತದೆ; ಪತ್ರಗಳು 6 -8 X 2–3.5 ಸೆಂ.ಮೀ. ಗಾತ್ರ,ಸಂಕುಚಿತ ಅಂಡವೃತ್ತದಿಂದ ಅಂಡವೃತ್ತ-ಭರ್ಜಿಯ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ತುದಿ, ಒಳಬಾಗಿದ-ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಅಂಚು, ಹೊಳಪನ್ನುಳ್ಳ ಮೇಲ್ಭಾಗ, ರೋಮರಹಿತವಾದ ತಳಭಾಗವನ್ನು ಹೊಂದಿರುತ್ತವೆ ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 4 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿರುವ ಪೀಠಛತ್ರ ಮಾದರಿಯವು;ಹೂಗಳು ಹಸಿರು ಮಿಶ್ರಿತ-ಬಿಳಿ;ತೊಟ್ಟು ಅಂದಾಜು 0.5 ಸೆಂ.ಮೀ. ಉದ್ದವಿರುತ್ತದೆ. |
| ಕಾಯಿ / ಬೀಜ : | ಕಾಯಿಗಳು ಡ್ರೂಪ್ ಮಾದರಿಯವು;ಬೀಜಗಳ ಸಂಖ್ಯೆ 2. |