ಕ್ಯಾಲೋಫಿಲ್ಲಮ್ ಏಪೆಟಾಲಮ್ Willd. - ಕ್ಲೂಸಿಯೇಸಿ

Synonym : ಕ್ಯಾಲೋಫಿಲ್ಲಮ್ ಡೆಸಿಪಿಯೆನ್ಸ್ Wt.

ಕನ್ನಡದ ಪ್ರಾದೇಶಿಕ ಹೆಸರು : ಹೊಳೆ ಹೊನ್ನೆ, ಇರೈ, ಕಲ್ಹೊನ್ನೆ, ಕಲ್ಪೂನೆ, ಶ್ರೀಹೊನ್ನೆ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ಹೊರ ತೊಗಟೆ ಹಳದಿ ಬಣ್ಣದಲ್ಲಿದ್ದು ಬಲಿಷ್ಠವಾದ ದೋಣಿಯಾಕಾರದ ಸೀಳಿಕೆಗಳನ್ನು ಹೊಂದಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ನಾಲ್ಕು ಕೋನಗಳನ್ನು ಹೊಂದಿರುತ್ತವೆ ಹಾಗೂ ಒಣಗಿದಾಗ ಹಳದಿ ಬಣ್ಣದಲ್ಲಿರುತ್ತವೆ.
ಜಿನುಗು ದ್ರವ : ಸಸ್ಯರಸ ಜಲರೂಪಿಯಾಗಿದ್ದು ನಂತರ ಹಳದಿ ಬಣ್ಣಕ್ಕೆ ತಿರುಗುತ್ತದೆ ಹಾಗೂ ಅಂಟು ಸ್ವರೂಪದ್ದಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ತೆ ಯಲ್ಲಿದ್ದು 0.3 ರಿಂದ 0.5 ಸೆಂ.ಮೀ ಉದ್ದದ ಎಲೆತೊಟ್ಟುಗಳನ್ನು ಹೊಂದಿರುತ್ತವೆ; ಕಿರುತೊಟ್ಟುಗಳು ಅಡ್ಡ ಸೀಳಿದಾಗ ಸಪಾಟ ಪೀನಮಧ್ಯ ಆಕಾರದಲ್ಲಿದ್ದು ರೋಮರಹಿತ-ವಾಗಿರುತ್ತವೆ; ಎಲೆಪತ್ರಗಳು 4-8 X 2-4.5 ಸೆಂ.ಮೀ ಗಾತ್ರ ಹೊಂದಿದ್ದು, ಸಾಮಾನ್ಯವಾಗಿ ಬುಗುರಿಯಾಕಾರದಿಂದ ಬುಗುರಿ-ಭರ್ಜಿ ಆಕಾರದಲ್ಲಿರುತ್ತವೆ; ಎಲೆ ತುದಿ ದುಂಡಾಕಾರದಿಂದ ದುಂಡಾಕಾರದ ತುದಿಯಲ್ಲಿ ತಗ್ಗುಳ್ಳ ಮಾದರಿಯಲ್ಲಿದ್ದು, ಎಲೆಯ ಬುಡ ದುಂಡಾದ ಅಥವಾ ಉಪ-ಛಿನ್ನಾಗ್ರ ರೂಪದ್ದಾಗಿರುತ್ತದೆ, ಎಲೆಗಳು ತೊಗಲನ್ನೋಲುವ ಮಾದರಿ-ಯಲ್ಲಿದ್ದು, ಮೇಲ್ಭಾಗದಲ್ಲಿ ಹೊಳಪನ್ನು ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು ಬಹುಸಂಖ್ಯೆಯಲ್ಲಿದ್ದು, ಕಡಿಮೆ ಅಂತರದಲ್ಲಿದ್ದು ಸಮಾಂತರದಲ್ಲಿರುತ್ತವೆ ಹಾಗೂ ಎಲೆಯ ದಪ್ಪವಾದ ಅಂಚಿನಲ್ಲಿ ಕೊನೆಗೊಳ್ಳುತ್ತವೆ;
ಪುಷ್ಪಮಂಜರಿ/ಹೂಗಳು : ಹೂಗಳು ಶ್ವೇತ ವರ್ಣ ಹೊಂದಿದ್ದು ಕವಲೊಡೆಯುವ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಡ್ರೂಪ್ ಗಳು ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿದ್ದು ಅಂಡಾಕಾರದಿಂದ ಅಂಡವೃತ್ತಾಕೃತಿಯಲ್ಲಿದ್ದು, 1.5 ಸಂ ಮೀ ಉದ್ದವಿದ್ದು ಒಂದು ಬೀಜವನ್ನೊಳ-ಗೊಂಡಿರುತ್ತವೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ ಕಡಿಮೆ ಎತ್ತರದ ಪ್ರದೇಶಗಳ (900 ಮೀ) ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳಲ್ಲಿನ ಝರಿಗಳ ಅಂಚಿನಲ್ಲಿ ಈ ಪ್ರಭೇಧ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Ges. Naturf. Freunde Berlin Mag. 5: 79.1811; Gamble,Fl.Madras1:76.1997(re.ed.);Sasidharan, Biodiversity documentation for Kerala-Flowering Plants, part 6:39.2004;Saldanha, Fl.Karnataka 1:202.1996.

Top of the Page