ಬ್ಲಾಕಿ ಯ ಅಂಬೆಲ್ಲೇಟ Baill. - ಯೂಫೊರ್ಬಿಯೇಸಿ

Synonym : ಕ್ರೋಟಾನ್ ಅಂಬೆಲ್ಲೇಟಸ್ Willd.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಕತ್ತರಿಸಿದಾಗ ಎಲೆಗಳು ಮತ್ತು ಕುಡಿಕೊಂಬೆಗಳ ತುದಿಯಿಂದ ಬೆಳ್ಳಗಿನ ಸಸ್ಯ ರಸ ಒಸರುತ್ತವೆ
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಅಥವಾ ಉಪ-ಅಭಿಮುಖಿಗಳಾಗಿದ್ದು ಕೆಲವು ವೇಳೆ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರಿಹೋಗುವಂತವು;ತೊಟ್ಟುಗಳು 0.5 – 4.5 ಸೆಂ.ಮೀ. ವರೆಗಿನ ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 5 -15 X 2.5 – 4.5 ಸೆಂ ಮೀ.ಗಾತ್ರ, ಅಂಡವೃತ್ತ ದಿಂದ ಬುಗುರಿ ,ಬುಗುರಿಯಿಂದ ಬುಗುರಿ-ಭರ್ಜಿಯವರೆಗಿನ ಆಕಾರ ಹೊದಿರುತ್ತವೆ;ತುದಿ ಕ್ರಮೇಣ ಚೂಪಾಗುವ ರೀತಿಯಲ್ಲಿರುತ್ತವೆ, ಬುಡ ಹಂತ ಹಂತವಾಗಿ ಚೂಪಾಗುವುದರಿಂದ ಬೆಣೆಯಾಕಾರದ ಮಾದರಿಯಲ್ಲಿರುತ್ತದೆ, ಅಂಚು ನಯವಾಗಿರುತ್ತದೆ. ಮೇಲ್ಮೈ ಉಪ-ತೊಗಲನ್ನೋಲುವ ರೀತಿಯಲ್ಲಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 6-8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿನಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ.ಗಂಡು ಹೂಗಳು ತೆಳುವಾದ ಪುಷ್ಪ ಮಂಜರಿವೃಂತವುಳ್ಳ ಪೀಠಛತ್ರ ಪುಷ್ಪಮಂಜರಿಯಲ್ಲಿರುತ್ತವೆ; ಹೆಣ್ಣು ಹೂಗಳು ತುದಿಯಲ್ಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳುಗೋಳಾಕಾರದಲ್ಲಿದ್ದು ಆಳವಾದ 3 ಹಾಲೆಗಳ ಸಮೇತವಿರುತ್ತವೆ;ಕಾಯಿಗಳ ಪುಷ್ಪ ಪಾತ್ರೆರೆ ದಳಗಳು ನೇರವಾಗಿರುತ್ತವೆ ; ಬೀಜಗಳು 3 .

ಜೀವಪರಿಸ್ಥಿತಿ :

1100 ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಈ ಫ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ (ಕೊಡಗು ಪ್ರದೇಶದವರೆಗೂ) ವ್ಯಾಪಿಸಿದೆ.

ಗ್ರಂಥ ಸೂಚಿ :

Etud. Gen. Euphorb.387. 18-20.1858;Gamble, Fl. Madras 2:1338.1993 (rep.ed.); Sasidharan, Biodiversity documentation for Kerala – Flowering plants, part 6, 411.2004;Saldanha, 2; 121.1996.

Top of the Page