ಬಿಸ್ಕೋಫಿಯ ಜವಾನಿಕ Bl. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆಗೆ ಬೆಳೆಯುವ, ಎಲೆಯುದುರುವ ಮಾದರಿಯ ದೊಡ್ಡ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ಬಲಿತಾಗ ನಯವಾಗಿ ಅಥವಾ ಚಕ್ಕೆ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ತೊಗಟೆಯ ಕತ್ತರಿಸಿದ ಜಾಗ ಕೆಂಪು ಅಂಟುಳ್ಳ ಸಸ್ಯ ರಸ ಸಮೇತವಾಗಿರುತ್ತದೆ.
ಎಲೆಗಳು : ಎಲೆಗಳು ಸಂಯುಕ್ತ ಮತ್ತು ಪರ್ಯಾಯ ಹಾಗೂ ಜೋಡನಾ ಮಾದರಿಯಲ್ಲಿದ್ದು ತ್ರಿಪರ್ಣಿಕೆ ರೀತಿಯವುಗಳಾಗಿರುತ್ತವೆ; ಕಾವಿನೆಲೆಗಳು ರೇಖಾತ್ಮಕ-ಭರ್ಜಿಯ ಆಕಾರ ಹೊಂದಿದ್ದು ಉದುರಿ ಹೋಗುವ ಮಾದರಿಯವು;ಸಂಯುಕ್ತ ಎಲೆಗಳ ನಡುಕಾಂಡ ದುಂಡಾಗಿದ್ದು 5 ರಿಂದ 15.5 ಸೆಂ.ಮೀ. ಉದ್ದ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು ಬುಡದಲ್ಲಿ ಉಬ್ಬನ್ನು ಹೊಂದಿರುತ್ತವೆ; ಪಾರ್ಶ್ವದ ಎಲೆಗಳ ತೊಟ್ಟು 1 ಸೆಂ.ಮೀ. ವರೆಗಿನ ಉದ್ದವಿದ್ದು, ಮಧ್ಯದಲ್ಲಿರುವ ಕಿರುಎಲೆಯ ತೊಟ್ಟು 3.5 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತದೆ;ಕಿರುಪತ್ರಗಳು ಅಂಡವೃತ್ತದಿಂದ ಹಿಡಿದು ವಿಶಾಲ ಅಂಡವೃತ್ತದ ಆಕಾರದಲ್ಲಿರುತ್ತವೆ, ಸಾಮಾನ್ಯವಾಗಿ ಮಧ್ಯದ ಕಿರುಎಲೆ ಕೊಂಚ ಹೆಚ್ಚು ಗಾತ್ರ ಹೊಂದಿರುತ್ತದೆ, 7.5 -13 X 3.5 - 9 ಸೆಂ ಮೀ. ಗಾತ್ರ ಹೊಂದಿದ್ದು,ಬಾಲರೂಪಿ ಅಥವಾ ಬಾಲರೂಪಿ - ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದುದರಿಂದ ದುಂಡಾದ ಮಾದರಿವರೆಗಿನ ಬುಡವನ್ನು ಹೊಂದಿರುತ್ತವೆ, ಅಂಚು ದುಂಡೇಣುಗಳನ್ನು ಹೊಂದಿರುತ್ತದೆ, ಮೇಲ್ಮೈತೊಗಲನ್ನೋಲುವ ರೀತಿಯದ್ದಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5 – 7 ಕವಲೊಡೆದ ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ರೋಮರಹಿತ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹ ಮಾದರಿಯವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿಗಳು ಕವಲೊಡೆಯುವ ಮಾದರಿಯವು; ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿದ್ದು ಹಸಿರು ಬಣ್ಣ ಹೊಂದಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 1.3 ಸೆಂ.ಮೀ ಅಡ್ಡಗಳತೆ ಹೊಂದಿದ್ದು, ಗೋಳಾಕಾರದಲ್ಲಿದ್ದು 6 ರಿಂದ 8 ಚತುರಸ್ರಾಕಾರದ ಹಾಗೂ ಮೂರು ಕೋನಗಳುಳ್ಳ ಬೀಜಗಳನ್ನೊಳಗೊಂಡಿರುತ್ತವೆ.

ಜೀವಪರಿಸ್ಥಿತಿ :

1300ಮೀ. ಎತ್ತರದವರೆಗಿನ ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ವಿಶೇಷವಾಗಿ ತೊರೆಗಳ ಬಳಿಯಲ್ಲಿ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಶಿಯ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳು.

ಗ್ರಂಥ ಸೂಚಿ :

Bijdr., 1168. 1826-1827;Gamble, Fl. Madras 2:1312.1993 (rep.ed.); Sasidharan, Biodiversity documentation for Kerala – Flowering plants, part 6, 410.2004;Saldanha, 2; 119.1996.

Top of the Page