ಬೆಂಟಿಂಕಿಯ ಕೊಂಡಪನ್ನ Berry ex Roxb. - ಅರೆಕೇಸಿ

Synonym : ಬೆಂಟಿಂಕಿಯ ಕೊಡ್ಡಪನ್ನ Berry

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15ಮೀ ಎತ್ತರಕ್ಕೆ ಬೆಳೆಯುವ ತೆಂಗಿನ ಜಾತಿಗೆ ಸೇರಿದ ಮರಗಳು
ಕಾಂಡ ಮತ್ತು ತೊಗಟೆ : ಕಾಂಡದ ಮೇಲ್ಮೈ ನಯವಾಗಿದ್ದು ಬೂದು ಬಣ್ಣ ಹೊಂದಿರುತ್ತದೆ. ಕಾಂಡದ ಮೇಲೆ ವಲಯಾಕಾರದ ಗರುತುಗಳಿರುತ್ತವೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಸಂಯುಕ್ತ ಗರಿರೂಪಿ ಮಾದರಿಯಲ್ಲಿದ್ದು 1.5 ರಿಂದ 2 ಮೀ ಉದ್ದವಾಗಿರುತ್ತವೆ; ಕಿರು ಎಲೆಗಳು 60 ರಿಂದ 75 ಸೆಂ.ಮೀ. ಉದ್ದ 2.5 ರಿಂದ 5ಸೆಂ.ಮೀ. ಅಗಲ ಹೊಂದಿದ್ದು ರೇಖಾತ್ಮಕ ಚತುರಸ್ರಾಕಾರದಲ್ಲಿದ್ದು ಎರಡರಿಂದ ಮೂರು ಎಲೆಗಳು ಅವಿಭಾಜ್ಯವಾಗಿರುತ್ತವೆ. ಸಾಮಾನ್ಯವಾಗಿ ಅಗ್ರಭಾಗ ದ್ವಿವಿಭಾಗಿಯವಾಗಿರುತ್ತದೆ. ಹಾಲೆಗಳು 5 ರಿಮದ 10ಸೆಂ.ಮೀ. ಉದ್ದವಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೊಂಬಾಳೆ ಮಂಜರಿ ಅಗ್ರಭಾಗದ ತುಸು ಕೆಳಗಿನ ಜಾಗದಲ್ಲಿ ಉದುರಿಹೋದ ಎಲೆಗಳ ಅಕ್ಷಾಕಂಕುಳಿನಲ್ಲಿರುತ್ತವೆ. ಆವರಣ ಪತ್ರಕಗಳು ಬಹುಸಂಖ್ಯೆಯಲ್ಲಿರುತ್ತವೆ ಹಾಗೂ ಪೊರೆರೂಪದಲ್ಲಿರುತ್ತವೆ. ಹೂಗಳು ಚಿಕ್ಕ ಗಾತ್ರ ಹೊಂದಿದ್ದು ಹೊಂಬಾಳೆ ಮಂಜರಿಯ ಕವಲುಗಳಲ್ಲಿ ಹುದುಗಿಕೊಂಡಿರುತ್ತವೆ; ಗಂಡು ಹೂಗಳು ಕಡುಕೆಂಪಾಗಿದ್ದು, ಹೆಣ್ಣು ಹೂಗಳು ಊದಾ ಅಥವಾ ನೇರಳೆಬಣ್ಣದ ಬಣ್ಣ ಹೊಂದಿರುತ್ತವೆ.; ಪುಷ್ಪಮಂಜರಿವೃಂತ ಕವಲೊಡೆದಿರುತ್ತದೆ .
ಕಾಯಿ /ಬೀಜ : ಕಾಯಿಗಳು ಉಪದುಂಡಾಕಾರದಲ್ಲಿದ್ದು ಸ್ವಲ್ಪ ಸಂಕುಚಿತವಾಗಿದ್ದು, 1 ರಿಂದ 1.2ಸೆಂ.ಮೀ. ವ್ಯಾಸ ಹೊಂದಿರುತ್ತವೆ. ಹಾಗೂ ಕೆಂಪು ಬಣ್ಣ ಪಡೆದಿದ್ದು, ಒಂದು ಬೀಜಗಳನ್ನೊ-ಳಗೊಂಡಿರುತ್ತದೆ.

ಜೀವಪರಿಸ್ಥಿತಿ :

1000 ದಿಂದ 1900 ಎತ್ತರದ ಪ್ರದೇಶಗಳಲ್ಲಿನ ಬಂಡೆಗಳ ಕಡಿದಾದ ಜಾಗಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತವೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯಲ್ಲಿ (ಅಗಸ್ತ್ಯಮಲೆ, ಏಲಮಲೆ, ಪಳನಿ ಬೆಟ್ಟಗಳು) ಕಂಡುಬರುತ್ತದೆ.

ಸ್ಥಿತಿ :

ಅಪರೂಪ

ಗ್ರಂಥ ಸೂಚಿ :

Fl. Ind. 3: 621.1832; Gamble, Fl. Madras 3: 1555.1998 (re. ed); Sasidharan, Biodiversity documentation for Kerala- Flowering Plants, part 6: 504. 2004.

Top of the Page